ಪೋಲೆಂಡ್ನ ಕಾನ್ಸಂಟ್ರೇಶನ್ ಕ್ಯಾಂಪ್ನಲ್ಲಿ ಕೆಲಸ ಮಾಡುತ್ತಿದ್ದ 97 ವರ್ಷದ ಮಾಜಿ ನಾಜಿ ಟೈಪಿಸ್ಟ್ ಮತ್ತು ಸ್ಟೆನೋಗ್ರಾಫರ್ 10,505 ಜನರ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾರೆ. ಆಕೆಗೆ ೨ ವರ್ಷ ಕಾಲ ಜೈಲು ವಿಧಿಸಲಾಗಿದೆ. ಹೌದು,ಈ ಮಾಹಿತಿಯನ್ನು ಮಾಧ್ಯಮ ವರದಿಗಳಲ್ಲಿ ನೀಡಲಾಗಿದೆ. ಇರ್ಗಾರ್ಡ್ ಫೋರ್ಚ್ನರ್ ಗೆ ಜರ್ಮನಿಯ ಇಟ್ಜೆಹೋ ನ್ಯಾಯಾಲಯವು ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನೀಡಿದೆ ಎಂದು ಬಿಬಿಸಿ ವರದಿ ಮಾಡಿದೆ.
2 ವರ್ಷ ಶಿಕ್ಷೆ ಯಾಕೆ?
ಅಪ್ರಾಪ್ತ ವಯಸ್ಕಳಾಗಿದ್ದಾಗ, ಫೋರ್ಚ್ನರ್ 1943 ರಿಂದ 1945 ರಲ್ಲಿ ನಾಜಿ ಆಡಳಿತದ ಅಂತ್ಯದವರೆಗೆ ಗ್ಡಾನ್ಸ್ಕ್ ಬಳಿಯ ಸ್ಟಟ್ಥಾಫ್ ಶಿಬಿರದಲ್ಲಿ ನಾಜಿ-ಆಕ್ರಮಿತ ಪೋಲೆಂಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಅಪರಾಧದ ಸಮಯದಲ್ಲಿ ಮಹಿಳೆ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಫೋರ್ಚ್ನರ್ ಶಿಕ್ಷೆಯನ್ನು ಬಾಲಾಪರಾಧಿ ನ್ಯಾಯಾಲಯದ ಅಡಿಯಲ್ಲಿ ನಮೂದಿಸಲಾಗುತ್ತದೆ. ಹಾಗಾಗಿ ಆಕೆಯ ಶಿಕ್ಷೆ ಪ್ರಮಾಣ ೨ ವರ್ಷ ಎಂದು ಹೇಳಲಾಗಿದೆ.
10,505 ಜನರ ಹತ್ಯೆಗೆ ಸಹಾಯ:
ಯಹೂದಿ ಖೈದಿಗಳು, ಯಹೂದಿ-ಅಲ್ಲದ ವ್ಯಕ್ತಿಗಳು ಮತ್ತು ವಶಪಡಿಸಿಕೊಂಡ ಸೋವಿಯತ್ ಸೈನಿಕರು ಸೇರಿದಂತೆ ಸುಮಾರು 65,000 ಜನರು ಸ್ಟಟ್ಥಾಫ್ನಲ್ಲಿ ಭಯಾನಕ ಪರಿಸ್ಥಿತಿಗಳಲ್ಲಿ ಕೊಲ್ಲಲ್ಪಟ್ಟರು. ಬಿಬಿಸಿ ವರದಿಯ ಪ್ರಕಾರ, ಫೋರ್ಚ್ನರ್ 10,505 ಜನರ ಹತ್ಯೆಗೆ ಸಹಾಯ ಮತ್ತು ಪ್ರಚೋದನೆ ನೀಡಿದ ಆರೋಪದಲ್ಲಿ ತಪ್ಪಿತಸ್ಥಳೆಂದು ಕಂಡುಬಂದಿದೆ ಮತ್ತು ಇತರ ಐವರ ಕೊಲೆ ಯತ್ನದಲ್ಲಿ ಭಾಗಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಸ್ಟಟ್ಥಾಫ್ನಲ್ಲಿ, ಜೂನ್ 1944 ರಿಂದ ಕೈದಿಗಳನ್ನು ಕೊಲ್ಲಲು ವಿವಿಧ ವಿಧಾನಗಳನ್ನು ಬಳಸಲಾಯಿತು. ಸಾವಿರಾರು ಜನರು ಗ್ಯಾಸ್ ಚೇಂಬರ್ಗಳಲ್ಲಿ ಸಾವನ್ನಪ್ಪಿದ್ದರು. ಸೆಪ್ಟೆಂಬರ್ 2021 ರಲ್ಲಿ ವಿಚಾರಣೆ ಪ್ರಾರಂಭವಾದಾಗ ಫೋರ್ಚ್ನರ್ ಕಣ್ಮರೆಯಾಗಿದ್ದಳು. ಆ ಬಳಿಕ ತನಿಖೆಯ ಸಂದರ್ಭದಲ್ಲಿ ಹ್ಯಾಂಬರ್ಗ್ನಲ್ಲಿ ಸಿಕ್ಕಿ ಬಿದ್ದಿದ್ದಾಳೆ.