ನ್ಯೂಸ್ ನಾಟೌಟ್ : ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಆಹಾರ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಅದರ ಜೊತೆಗೆ ಎಲ್ ಪಿ ಜಿ ಗ್ಯಾಸ್ ನ ಬೆಲೆ ಕೂಡ ಗಗನದೆತ್ತರಕ್ಕೆ ಏರಿದೆ. ಇದರ ಬೆಲೆ ಕಂಡು ಜನರು ಕಂಗಾಲಾಗಿ ಹೋಗಿದ್ದಾರೆ. ಆದರೆ ಇನ್ನು ಮುಂದೆ ಚಿಂತೆ ಬಿಟ್ಟು ಸುಲಭ ರೀತಿಯಲ್ಲಿ ಗ್ಯಾಸ್ ಬಳಕೆ ಮಾಡಬಹುದು . ಹೆಚ್ಚಿನವರು ಗ್ಯಾಸ್ ಬಳಕೆ ಬಿಟ್ಟು ಇಂಡಕ್ಷನ್ ಗಳತ್ತ ಒಲವು ತೋರಿಸುತ್ತಿದ್ದಾರೆ.ಇದು ಕೂಡ ದುಬಾರಿ ಕರೆಂಟ್ ಖರ್ಚು ಜಾಸ್ತಿ.ಇನ್ನು ಮುಂದೆ ಗ್ಯಾಸ್ ಸಿಲಿಂಡರ್ , ವಿದ್ಯುತ್ ಒಲೆಯ ಅಗತ್ಯ ಬರುವುದಿಲ್ಲ. ಯಾಕೆಂದರೆ ನೀವು ಸುಲಭ ರೀತಿಯಲ್ಲಿ ಖರ್ಚು ಇಲ್ಲದೇ ಅಡುಗೆ ತಯಾರಿ ಮಾಡಬಹುದು.
ಹೌದು, ಸರ್ಕಾರವು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾವನ್ನು ಪರಿಚಯಿಸಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ‘ಸೂರ್ಯ ನೂತನ್’ ಹೆಸರಿನ ಸೋಲಾರ್ ಸ್ಟವ್ ಅನ್ನು ನೀಡಲು ಸಿದ್ಧವಾಗಿದೆ. ಅದುವೇ ‘ಸೊಲಾರ್ ಸ್ಟವ್ ‘ . ಇದನ್ನು ಛಾವಣಿ ಮೇಲೆ ಅಥವಾ ಬಿಸಿಲಲ್ಲಿ ಇಡುವ ಅವಶ್ಯಕತೆ ಇಲ್ಲ. ಮನೆಯೊಳಗೆ ಇಟ್ಟು ಅಡುಗೆ ಮಾಡಬಹುದು. ನೋಡುವುದಕ್ಕೆ ಇದು ಸಾಮಾನ್ಯ ಸ್ಟವ್ ನಂತೆಯೆ ಕಂಡರೂ ಇದರ ವೈಶಿಷ್ಟವೇ ಬೇರೆ. ಮೊದಲ ಬಾರಿ ಖರೀದಿ ಮಾಡುವಾಗ 12 ಸಾವಿರ ಕೊಡಬೆಕಾಗುತ್ತದೆ. ಒಂದು ಬಾರಿ ಖರ್ಚು ಮಾಡಿದ ಬಳಿಕ ಜೀವನದುದ್ದಕ್ಕೂ ಉಚಿತವಾಗಿ ಅಡುಗೆ ಮಾಡಬಹುದು. ಗ್ಯಾಸ್ ಸಿಲಿಂಡರ್ ತರಹ ತಿಂಗಳು ತಿಂಗಳು ಬುಕ್ ಮಾಡುವ ಅಗತ್ಯವಿಲ್ಲ.
ಏನಿದರ ವಿಶೇಷತೆ…?
– ಬೇರೆ ಸೌರ ಒಲೆಗಳಿಗಿಂತ ಸೂರ್ಯ ನೂತನ್ ಸೋಲಾರ್ ಸ್ಟವ್ ವಿಭಿನ್ನವಾಗಿದೆ.
– ಇದರಲ್ಲಿ 2 ಘಟಕಗಳಿವೆ. ಒಂದು ಘಟಕವನ್ನು ಬಿಸಿಲಲ್ಲಿ ಇಡಬೇಕು. ಇನ್ನೊಂದನ್ನು ಅಡುಗೆ ಮನೆಯಲ್ಲಿ ಇಡಬೇಕು.
– ಇದರ ಪ್ರಮುಖ ವೈಶಿಷ್ಟ್ಯವೆಂದರೆ ನೀವು ರಾತ್ರಿ ವೇಳೆಯೂ ಬಳಸಬಹುದು.
ಸ್ಟವ್ ಬೆಲೆ ಎಷ್ಟು…?
ಒಂದು ಸ್ಟವ್ ಬೆಲೆ 12 ಸಾವಿರ ರೂಪಾಯಿಗಳು. ಟಾಪ್ ವೆರಿಯಂಟ್ ಬೆಲೆ 23 ಸಾವಿರ ರೂಪಾಯಿ. ಆದರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಇದನ್ನು ಇನ್ನೂ ಮಾರುಕಟ್ಟೆಗೆ ಪರಿಚಯಿಸಿಲ್ಲ. ಶೀಘ್ರದಲ್ಲೇ ಇಂಡಿಯನ್ ಆಯಿಲ್ ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಪಂಪ್ ನಿಂದ ಇದನ್ನು ಮಾರಾಟಕ್ಕೆ ಲಭ್ಯವಾಗುವಂತೆ ಮಾಡುವ ಯೋಜನೆ ಹಾಕಿಕೊಂಡಿದೆ.