ನ್ಯೂಸ್ ನಾಟೌಟ್ :ಆಧುನಿಕ ತಂತ್ರಜ್ಞಾನದಿಂದಾಗಿ ಮನುಷ್ಯನಿಗೆ ಎಲ್ಲಾ ಕೆಲಸಗಳು ಸುಲಭವಾಗಿದೆ.ಪ್ರತಿಯೊಂದು ಕೆಲಸಗಳಿಗೂ ಈಗ ಮೆಷಿನ್ ಪ್ರಮುಖ ಪಾತ್ರ ವಹಿಸುತ್ತದೆ.
ಈಗ ಚಳಿಗಾಲದ ಸಮಯ ಚಳಿಗಾಲದಲ್ಲಿ ತಣ್ಣೀರಿಗೆ ಕೈ ಹಾಕಿ ಕೆಲಸ ಮಾಡುವುದು ಸ್ವಲ್ಪ ಕಷ್ಟವೇ. ಹೀಗಿರುವಾಗ ಬಟ್ಟೆಯನ್ನು ಕೈಯ್ಯಲ್ಲಿ ತೊಳೆಯುವುದು ಕೂಡಾ ಬಲು ಕಷ್ಟ. ವಾಷಿಂಗ್ ಮೆಷಿನ್ ಇದ್ದರೆ ಈ ಚಿಂತೆ ಇರುವುದಿಲ್ಲ. ಇದಕ್ಕಾಗಿ ಅಗ್ಗದ ಬೆಲೆಯ ವಾಷಿಂಗ್ ಮೆಷಿನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಉನ್ನತ ವೈಶಿಷ್ಟ್ಯಗಳನ್ನು ಹೊಂದಿರುವ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮೆಷಿನ್ ಇದೀಗ ಮಾರುಕಟ್ಟೆಯಲ್ಲಿದೆ. ಅಮೆರಿಕದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ವೈಟ್ ವೆಸ್ಟಿಂಗ್ಹೌಸ್ ವಾಷಿಂಗ್ ಮೆಷಿನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಫ್ಲಿಪ್ಕಾರ್ಟ್ನಲ್ಲಿ 3 ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ಗಳನ್ನು ಮಾರಾಟಕ್ಕೆ ಬಿಡಲಿದೆ.
ವಾಷಿಂಗ್ ಮೆಷಿನ್ ಬೆಲೆ ಎಷ್ಟು?
ವೈಟ್ ವೆಸ್ಟಿಂಗ್ಹೌಸ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ಮೂರು ಮಾದರಿಗಳಲ್ಲಿ (6KG, 8.5KG ಮತ್ತು 9.5KG) ಲಭ್ಯವಿರಲಿದೆ. ಅವುಗಳ ಬೆಲೆ ಕ್ರಮವಾಗಿ 7190, 8999 ಮತ್ತು 10499 ರೂ. ವಾಷಿಂಗ್ ಮೆಷಿನ್ ಅನ್ನು ಫ್ಲಿಪ್ಕಾರ್ಟ್ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಎಲ್ಲಾ ಮೂರು ಮಾದರಿಗಳು ನಾಳೆಯಿಂದ ಲಭ್ಯ.
ವಾಷಿಂಗ್ ಮೆಷಿನ್ ವೈಶಿಷ್ಟ್ಯಗಳು
ಈ ವಾಷಿಂಗ್ ಮೆಷಿನ್ನಲ್ಲಿ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳು ಲಭ್ಯವಿರಲಿವೆ. ಡಬಲ್ ಇನ್ಲೆಟ್, ಡಬಲ್ ವಾಟರ್ ಫಾಲ್, ಮ್ಯಾಜಿಕ್ ಫಿಲ್ಟರ್, ಕಾಲರ್ ಸ್ಕ್ರಬ್ಬರ್ ಮತ್ತು ಏರ್-ಡ್ರೈ ಫೀಚರ್ನಂತಹ ವೈಶಿಷ್ಟ್ಯಗಳೊಂದಿಗೆ ಈ ಮೆಷಿನ್ ಅನ್ನು ಸಿದ್ದಗೊಳಿಸಲಾಗಿದೆ. ಈ ಮೆಷಿನ್ ರಸ್ಟ್ ಫ್ರೀ ಪ್ಲಾಸ್ಟಿಕ್ ಬಾಡಿ ಮತ್ತು ಶಕ್ತಿಯುತ ಇನ್ಸುಲೇಟೆಡ್ ಮೋಟಾರ್ನೊಂದಿಗೆ ಬರುತ್ತವೆ.