ನ್ಯೂಸ್ ನಾಟೌಟ್: ಇತ್ತೀಚೆಗೆ ಅಡಿಕೆ ದರ ಗಗನಕ್ಕೆ ಏರಿದೆ. ಈ ಬೆನ್ನಲ್ಲೇ ಅಡಿಕೆ ಮಾಲೀಕರಿಗೆ ಸ್ವಲ್ಪ ಆತಂಕವೂ ಇದ್ದೇ ಇದೆ.
ಹೌದು, ಇದೀಗ ಅಡಿಕೆ ಮಾಲೀಕರಿಗೆ ಒಣಗಿಸಲು ಹಾಕಿದ ಅಡಿಕೆಯನ್ನು ಕಳ್ಳರಿಂದ ರಕ್ಷಿಸುವುದು ಅಥವಾ ತೋಟದಲ್ಲಿ ಅಡಿಕೆ ಕಳ್ಳತನ ಆಗದ ಹಾಗೆ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಡಬ ತಾಲೂಕಿನ ಎಣ್ಮೂರಿನಲ್ಲಿ ಕಳ್ಳರು ತಡರಾತ್ರಿ ಅಡಿಕೆ ಕದ್ದು ಅದನ್ನು ಬಸ್ ಸ್ಟ್ಯಾಂಡ್ ನಲ್ಲೇ ಸುಲಿದು ಸಿಪ್ಪೆಯನ್ನು ಅಲ್ಲೇ ಹಾಕಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ನಿಲ್ದಾಣದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ರಾಶಿ ಅಡಿಕೆ ಸಿಪ್ಪೆ, ನಾಲ್ಕೈದು ಅಡಿಕೆ, ಕಬ್ಬಿಣದ ರಾಡ್ ಪತ್ತೆಯಾಗಿದ್ದು ಸ್ಥಳೀಯರು ಕಳ್ಳರ ಹಾವಳಿ ಎಂದೇ ಹೇಳುತ್ತಿದ್ದಾರೆ. ಈ ಕಳ್ಳ ಯಾರೆಂಬುದು ಸಾರ್ವಜನಿಕ ವಲಯದಲ್ಲಿ ಸದ್ಯ ಚರ್ಚೆ ನಡೆಯುತ್ತಿದೆ . ಎಣ್ಮೂರಿನಲ್ಲಿ ಈ ಮೊದಲು ಬೀಟ್ ಪೊಲೀಸರ ರಾತ್ರಿ ಹೊತ್ತು ತಪಾಸಣೆ ಮಾಡುತ್ತಿದ್ದರು. ಆದರೆ ಇದೀಗ ಪೊಲೀಸರು ಅತ್ತ ಸುಳಿಯದಿರುವುದರಿಂದ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಈ ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಕಳ್ಳರಿಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಎಚ್ಚರಿಸಿದ್ದಾರೆ.