ನ್ಯೂಸ್ ನಾಟೌಟ್ : ದಿನ ನಿತ್ಯ ಹಣ್ಣು- ತರಕಾರಿಗಳನ್ನುಗಳನ್ನು ಸೇವಿಸುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ಆದ್ದರಿಂದ ಆರೋಗ್ಯ ಸಮಸ್ಯೆಗಳನ್ನೂ ದೂರ ಮಾಡಬಹುದು.ಈಗ ಚಳಿಗಾಲದ ಸಮಯ.ಶೀತ ,ಕೆಮ್ಮ,ಕಫ ಹೀಗೆ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಅದರಲ್ಲೂ ಈ ಶ್ವಾಸಕೋಶವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ.ಹಾಗಾದರೆ ಶ್ವಾಸಕೋಶ ಆರೋಗ್ಯಕ್ಕೆ ಅನುಗುಣವಾಗುವ ಹಣ್ಣುಗಳು ಯಾವುದು ಎಂದು ತಿಳಿಯಿರಿ.
ಹಣ್ಣು- ತರಕಾರಿಗಳನ್ನು ಸೇವಿಸಬಹುದು, ಇಲ್ಲದಿದ್ದರೆ ಜ್ಯೂಸ್ ಮಾಡಿ ಕುಡಿಯಬಹುದು . ಇದನ್ನು ಸೇವಿಸುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ಅಲ್ಲದೆ ಸದೃಢವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಹಣ್ಣು – ತರಕಾರಿಗಳಿಂದ ಶ್ವಾಸಕೋಶಕ್ಕೆ ಬಹಳ ಪ್ರಯೋಜನ ದೊರಕುತ್ತದೆ.
ಬೀಟ್ ರೂಟ್ ಜ್ಯೂಸ್:
ಬೀಟ್ ರೂಟ್ ನಲ್ಲಿ ಕಬ್ಭಿಣದ ಅಂಶ ಹೆಚ್ಚಾಗಿರುತ್ತದೆ. ಜೀವಸತ್ವಗಳು ಮತ್ತು ಖನಿಜಗಳನ್ನು ಹೊದಿರುತ್ತದೆ.ಬೀಟ್ ರೂಟ್ ಜ್ಯೂಸ್ ಕುಡಿದರೆ ದೇಹಕ್ಕೆ ತುಂಬಾ ಒಳ್ಳೆಯದು ಹಾಗೂ ಒಳ್ಳೆಯ ಪ್ರಯೋಜನಕಾರಿಯಾಗುತ್ತದೆ. ಇದು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ.
ತರಕಾರಿ ಜ್ಯೂಸ್:
ಲೆಟಿಸ್ , ಎಲೆಕೋಸು, ಮೆಂತ್ಯ ಹಾಗೂ ಇನ್ನಿತರ ತರಕಾರಿಗಳಿಂದ ಮಾಡಿದ ರಸವನ್ನು ಸೇವಿಸದರೆ ಉತ್ತಮ. ಇವುಗಳಲ್ಲಿ ಕಬ್ಬಿಣ, ಪೊಟ್ಯಾಸಿಯಮ್ , ಕ್ಯಾಲ್ಸಿಯಂ, ಕ್ಯಾರೊಟಿನಾಯ್ಡ್ ಗಳು ಇದೆ. ಇದು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಹಾಗೆ ಉರಿಯೂತದ ಸಮಸ್ಯೆಯನ್ನುನಿವಾರಿಸುತ್ತದೆ.
ಕುಂಬಳಕಾಯಿ:
ಕುಂಬಳಕಾಯಿ ಜ್ಯೂಸ್ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಕ್ಯಾರೊಟಿನಾಯ್ಡ್ ಗಳನ್ನು ಹೊಂದಿರುತ್ತದೆ. ಇದರ ರಸ ಸೇವಿಸಿದರೆ ಉರಿಯೂತದ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಇದು ಶ್ವಾಸಕೋಶವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಸೇಬು ಹಣ್ಣಿನ ಜ್ಯೂಸ್:
ಸೇಬು ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಇದೆ. ಹಾಗಾಗಿ ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ. ಅದಕ್ಕಾಗಿ ಸೇಬು ಹಣ್ಣಿನ ಜ್ಯೂಸ್ ಸೇವಿಸಿದರೆ ತುಂಬಾ ಒಳ್ಳೆಯದು.