ನ್ಯೂಸ್ ನಾಟೌಟ್ : ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿರುವ ರಿಷಭ್ ಪಂತ್ ಶುಕ್ರವಾರ ಬೆಳ್ಗಂ ಬೆಳಗ್ಗೆ ಅಪಘಾತಕ್ಕೆ ತುತ್ತಾಗಿ ಪಂತ್ ಗಂಭೀರ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಪಂತ್ ಬೆನ್ನು, ತಲೆ, ಕಾಲಿಗೆ ಗಂಭೀರ ಗಾಯವಾಗಿದೆ. ಜತೆಗೆ ಸುಟ್ಟ ಗಾಯಗಳು ಆಗಿವೆ. ಡೆಹ್ರಾಡೂನ್ ನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅವರನ್ನು ಹೆಚ್ಚಿನ ಚಿಕಿತ್ಸಗೆ ದೆಹಲಿಗೆ ಏರ್ ಲಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಕಾರ್ಯದರ್ಶಿ ಟ್ವಿಟ್ ಮಾಡಿ ಪಂತ್ ಆದಷ್ಟು ಬೇಗ ಚೇತರಿಕೆ ಆಗಲಿ ಎಂದು ಹಾರೈಸಿದ್ದಾರೆ. ಅಲ್ಲದೆ ಬಿಸಿಸಿಐ ಪಂತ್ ಕುಟುಂಬದ ಜತೆಗೆ ಇದ್ದು ಎಲ್ಲ ರೀತಿಯ ನೆರವನ್ನು ನೀಡುವುದಾಗಿಯೂ ತಿಳಿಸಿದ್ದಾರೆ.
ದಿಲ್ಲಿ ಹಾಗೂ ಉತ್ತರಾಖಂಡ್ ದಾರಿಯಲ್ಲಿ ಇವರ ಕಾರು ಡಿವೈಡರ್ ಗೆ ಗುದ್ದಿ ಅಪಘಾತ ಸಂಭವಿಸಿತ್ತು. ಮರ್ಸಿಡಿಸ್ ಬೆಂಜ್ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಸದ್ಯ ಪಂತ್ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬರುತ್ತಿದೆಯಾದರೂ ಅವರು ಇನ್ನೂ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ತತಿಳಿದು ಬಂದಿದೆ. ಅತಿಯಾದ ವೇಗದಿಂದ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.