ನ್ಯೂಸ್ ನಾಟೌಟ್: ನಿಜವಾದ ಆನೆಯ ಕೈಗೆ ಸಿಕ್ಕಿ ಕೆಲವರು ಪ್ರಾಣ ಬಿಟ್ಟಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಆಸಾಮಿ ಕೃತಕ ಆನೆಯ ಕೈಗೆ ಸಿಕ್ಕಿ ಹಲವು ಗಂಟೆ ಒದ್ದಾಡಿದ ಘಟನೆ ವರದಿಯಾಗಿದೆ. ಈ ಸ್ವಾರಸ್ಯಕರ ಘಟನೆ ನಡೆದಿದ್ದು ಗುಜರಾತ್ನ ದೇವಸ್ಥಾನವೊಂದರಲ್ಲಿ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೇವಸ್ಥಾನವೊಂದರಲ್ಲಿ ಸುಂದರವಾದ ಕೃತಕ ಆನೆಯ ಪ್ರತಿಮೆಯನ್ನು ಇಡಲಾಗಿತ್ತು. ನೋಡುವುದಕ್ಕೆ ತುಂಬಾ ಮುದ್ದಾಗಿದ್ದ ಪ್ರತಿಮೆ ಕಂಡು ವ್ಯಕ್ತಿಯೊಬ್ಬ ಅದರ ಜೊತೆ ಹುಚ್ಚು ಕಟ್ಟಿದ್ದಾನೆ. ಆನೆಯ ಹೊಟ್ಟೆಯ ಅಡಿಯಿಂದ ನುಗ್ಗಿ ಬರುವುದಕ್ಕೆ ಪ್ರಯತ್ನಿಸಿದ್ದಾನೆ. ಈ ವೇಳೆ ಆತನ ದೇಹ ಕೃತಕ ಆನೆಯ ಹೊಟ್ಟೆಯಡಿ ಸಿಲುಕಿಕೊಂಡಿದೆ. ಇದರಿಂದ ಆತ ಚೀರಿಕೊಂಡಿದ್ದಾನೆ. ತಕ್ಷಣ ಸಮೀಪದಲ್ಲಿದ್ದ ಅರ್ಚಕರೊಬ್ಬರು ರಕ್ಷಿಸುವ ಕೆಲಸ ಮಾಡಿದ್ದಾರೆ. ಹರಸಾಹಸ ಮಾಡಿದ ಬಳಿಕ ಆತನನ್ನು ಹೊರಗೆಳೆದು ತೆಗೆಯಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಈ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.