ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಿಂದ ಇತ್ತೀಚಿಗೆ ಭಾರತೀಯ ಸೈನ್ಯಕ್ಕೆ ಸೇರುತ್ತಿರುವ ಯುವತಿಯರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಸುಳ್ಯ ತಾಲೂಕಿನಿಂದ ಕಳೆದ ಕೆಲವು ವರ್ಷಗಳಲ್ಲಿ ಹಲವು ಯುವತಿಯರು ದೇಶ ಸೇವೆಯ ಕಾಯಕಕ್ಕೆ ಸೇರಿಕೊಂಡಿದ್ದಾರೆ. ಇದೀಗ ಐವರ್ನಾಡು ಗ್ರಾಮದ ರಕ್ಷಿತಾ ಎಂ.ಬಿ ಕನಸು ನನಸಾಗಿಸಿಕೊಂಡಿದ್ದಾರೆ. ಇವರು ಮಿಲಿಟರಿ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಪಾಸಾಗಿ , ಅಸ್ಸಾಂ ರೈಫಲ್ಸ್ ಗೆ ಆಯ್ಕೆಯಾಗಿದ್ದಾರೆ.
ರಕ್ಷಿತಾ ಎಂ.ಬಿ ಧರ್ಮಸ್ಥಳ ಮೂಲದವರು. ಇವರು ಭಾಸ್ಕರ ಗೌಡ ಮಡ್ತಿಲ- ಮಮತಾ ದಂಪತಿಯ ಪುತ್ರಿ. ರಕ್ಷಿತಾ ಎಂ.ಬಿ 5ನೇ ತರಗತಿವರೆಗೆ ಐವರ್ನಾಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಕಾರ್ಕಳದ ಅತ್ತೂರು ಸೈಂಟ್ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದರು. ಪ್ರೌಢ ಶಿಕ್ಷಣವನ್ನು ನಿಟ್ಟೆ ಎನ್.ಎಸ್.ಎ.ಎಂ. ಪಿ.ಯು. ಕಾಲೇಜ್ನಲ್ಲಿ ಪೂರ್ಣಗೊಳಿಸಿದರು. ಪದವಿ ಶಿಕ್ಷಣವನ್ನು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪೂರೈಸಿದರು. ಇದೀಗ ಮಿಲಿಟರಿಗೆ ಸೇರುವ ಎಲ್ಲಾ ಪರೀಕ್ಷೆಗಳನ್ನು ಪೂರೈಸಿ ಅಸ್ಸಾಂ ರೈಫಲ್ಸ್ ಗೆ ಆಯ್ಕೆಯಾಗಿದ್ದಾರೆ. ಡಿ. .25 ರಂದು ಅವರು ನಾಗಾಲ್ಯಾಂಡ್ನ ಸುಖೋವಿಯಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಲು ಅಸ್ಸಾಂಗೆ ತೆರಳಲಿದ್ದಾರೆ.