ನ್ಯೂಸ್ ನಾಟೌಟ್ : ಆಧಾರ್ ಕಾರ್ಡ್ ನಲ್ಲಿ ಪಾನ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಇನ್ನು ಮುಂದೆ ಪಾನ್ ಕಾರ್ಡ್ ನ್ನು ರದ್ದುಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಖಡಕ್ ಸೂಚನೆ ನೀಡಿದೆ. ಆದಾಯ ತೆರಿಗೆ ಕಾಯ್ದೆ 1961 ರ ಪ್ರಕಾರ, ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪಾನ್ ಬಳಕೆದಾರರು ಮಾರ್ಚ್ 2023ರ ರೊಳಗಾಗಿ ಪಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.ಇಲ್ಲದೇ ಇದ್ದಲ್ಲಿ ಏಪ್ರಿಲ್ ೦೧ರಿಂದ ಲಿಂಕ್ ಮಾಡದ ಪಾನ್ ಕಾರ್ಡ್ ನಿಷ್ಕ್ರಿಯಗೊಳುತ್ತದೆ ಎಂದು ಹೇಳಿದೆ.
ಸುತ್ತೋಲೆ ಹೊರಡಿಸಿತ್ತು:
ಮೇ 2017 ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ ರಾಜ್ಯಗಳಲ್ಲಿ ವಾಸಿಸುವ ಜನರಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ.ಮಾ.30 ರಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ ಟ್ಯಾಕ್ಸ್ ಒಂದು ಸುತ್ತೋಲೆಯನ್ನು ಹೊರಡಿಸಿತ್ತು.ಒಮ್ಮೆ ಪ್ಯಾನ್ ನಿಷ್ಕ್ರೀಯಗೊಂಡರೆ ಐಟಿ ಕಾಯ್ದೆಯಡಿಯಲ್ಲಿ ಒಬ್ಬ ವ್ಯಕ್ತಿಯು ಎಲ್ಲಾ ಪರಿಣಾಮಗಳಿಗೆ ಜವಾಬ್ದಾರನಾಗಿರುತ್ತಾನೆ ಎಂದು ತಿಳಿಸಿದೆ.ವ್ಯಕ್ತಿಯು ಐ-ಟಿ ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ ಮತ್ತು ಬಾಕಿ ಇರುವ ರಿಟರ್ನ್ ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ. ಅಲ್ಲದೆ ಬಾಕಿಯಿರುವ ಮರುಪಾವತಿಗಳನ್ನು ನೀಡಲಾಗುವುದಿಲ್ಲ. ದೋಷಪೂರಿತ ರಿಟರ್ನ್ ಗಳ ಸಂದರ್ಭದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದಿಲ್ಲ ಎಂದು ಹೇಳಲಾಗಿದೆ.