ನ್ಯೂಸ್ ನಾಟೌಟ್ : ಕೆಲವರಿಗೆ ತಮ್ಮ ದೇಹದ ಮೈಕಟ್ಟು ತುಂಬಾ ಸುಂದಾರವಾಗಿರಬೇಕು, ಸಾಧಾರಣ ದಪ್ಪ ಇರಬೇಕು ಎಂದು ಆಸೆ ಇರುತ್ತದೆ. ದಪ್ಪ ಇದ್ದವರು ತೂಕ ಇಳಿಸಲು ಸರ್ಕಸ್ ಮಾಡುತ್ತಿರುತ್ತಾರೆ. ಆದರೆ ಕೆಲವರು ಸಣ್ಣಗೆ ಆಗುವುದಿಲ್ಲ.
ಇದರಿಂದೆಲ್ಲ ನೊಂದು ಕೆಲವರು ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ವ್ಯಾಯಾಮ, ಜಾಗಿಂಗ್, ವಾಕಿಂಗ್ ಮಾಡುವುದರ ಮೂಲಕ ತೂಕ ಇಳಿಸಲು ಪ್ರಯತ್ನ ಮಾಡುತ್ತಿರುತ್ತಾರೆ. ತೂಕ ಇಳಿಸಿಕೊಳ್ಳಲು ಮುಖ್ಯವಾಗಿ ಮೂರು ವಿಷಯಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿರುವುದು ಅಗತ್ಯವಾಗಿರುತ್ತದೆ. ಮೊದಲಿಗೆ ಪೌಷ್ಠಿಕ ಆಹಾರ, ಎರಡನೆಯದು ವ್ಯಾಯಾಮ ಅಥವಾ ಜಾಗಿಂಗ್ ಮೂರನೆಯದು ಸರಿಯಾದ ಸಮಯಕ್ಕೆ ಕನಿಷ್ಠ ೮ ಗಂಟೆ ನಿದ್ದೆ ಮಾಡುವುದು . ಈ ಮೂರು ವಿಚಾರಗಳನ್ನು ಸರಿಯಾಗಿ ಪಾಲಿಸಿದರೆ ಮಾತ್ರ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೂರು ವಿಷಯಗಳಲ್ಲಿ ಕೆಲವರು ವ್ಯಾಯಾಮಕ್ಕೆ ಮಾತ್ರ ಹೆಚ್ಚು ಆದ್ಯತೆ ನೀಡುತ್ತಾರೆ. ಇದರಿಂದ ತೂಕ ಇಳಿಸಿಕೊಳ್ಳುವುದು ಅಥವಾ ನಿರ್ವಹಣೆ ಮಾಡುವುದು ಸಾಧ್ಯವಾಗುವುದಿಲ್ಲ. ಸರಿಯಾದ ಫಲಿತಾಂಶ ಸಿಗಬೇಕಾದರೆ ಶ್ರದ್ಧೆ, ತಾಳ್ಮೆ, ಛಲ, ಆತ್ಮವಿಶ್ವಾಸದಿಂದ ನಿರಂತರ ಪ್ರಯತ್ನ ಮಾಡಬೇಕು.
ನೀವು ತಿನ್ನುವ ಆಹಾರದ ಮೇಲೆ ನಿಮ್ಮ ಶರೀರ ಬೆಳೆಯುತ್ತದೆ. ಹಾಗಾಗಿ ಸೇವಿಸುವ ಆಹಾರದ ಬಗ್ಗೆ ಕೊಂಚ ಗಮನಹರಿಸಬೇಕು. ಯಾವ ಆಹಾರ ಸೇವಿಸಬೇಕು ಯಾವ ಆಹಾರ ಸೇವಿಸಬಾರದು ಎಂಬ ಸಾಮನ್ಯ ಜ್ಞಾನ ಇರಬೇಕು. ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರೋಟೀನ್ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುತ್ತಾರೆ. ಇದು ತೂಕ ಇಳಿಕೆಗೆ ನೆರವಾಗುತ್ತದೆ. ಇದರ ಜೊತೆಯಲ್ಲಿ ಇತರೆ ಪೋಷಕಾಂಶಗಳು ಸಹ ನಮ್ಮ ದೇಹಕ್ಕೆ ಅಗತ್ಯವಿರುತ್ತದೆ. ಅವುಗಳ ಬಗ್ಗೆಯೂ ಗಮನಹರಿಸಬೇಕು. ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರ ಪದಾರ್ಧ ತಿನ್ನುವುನ್ನು ಕಡಿಮೆ ಮಾಡಿದರೆ ಸಾಕು. ಉದಾ: ನಮ್ಮ ಊಟದ ತಟ್ಟೆಯಲ್ಲಿ ಅನ್ನದ ಪ್ರಮಾಣ ೨೫ರಷ್ಟಿದ್ದರೆ ತರಕಾರಿ ಅಥವಾ ಸೊಪ್ಪಿನ ಪ್ರಮಾಣ ೬೫ ರಷ್ಟು ಇರಬೇಕು.
ತೂಕ ಇಳಿಸಿಕೊಳ್ಳಲು ಎಲ್ಲರೂ ವ್ಯಾಯಮದ ಮೊರೆ ಹೋಗುತ್ತಾರೆ. ಆದರೆ ಇದು ಒಂದೇ ಕ್ರಮದಿಂದ ದೇಹದ ತೂಕ ಇಳಿಯುವುದಿಲ್ಲ. ವ್ಯಾಯಾಮ, ಜಾಗಿಂಗ್, ವಾಕಿಂಗ್ ಮುಂತಾದ ಕ್ರಮಗಳು ನಮ್ಮ ದೇಹದ ಚಯಾಪಚಯ ಕ್ರಿಯೆ( ಮೆಟಬಾಲಿಸಂ ರೇಟ್) ಹೆಚ್ಚಿಸುವ ಕ್ರಿಯೆಯಾಗಿದೆ. ಈ ಮೆಟಬಾಲಿಸಂ ರೇಟ್ ಹೆಚ್ಚಾದಾಗ ನಮ್ಮ ದೇಹದಲ್ಲಿನ ಕೊಬ್ಬು ಸುಡಲು ನೆರವಾಗುತ್ತದೆ. ಇದರರ್ಧ ಕೊಬ್ಬು ಕರಗಲು ನೆರವಾಗುತ್ತದೆ. ಇಂತಹ ಸಮಯದಲ್ಲಿ ನಮ್ಮ ದೇಹ ಹೆಚ್ಚು ಕೊಬ್ಬು ಶೇಖರಣೆ ಮಾಡಲು ಪ್ರಯತ್ನಿಸುತ್ತದೆ ಆಗ ನೀವು ಕಾರ್ಬೋಹೈಡ್ರೇಟ್ ಇರುವ ಪದಾರ್ಥಗಳನ್ನು ಕಡಿಮೆ ಮಾಡಿ ಪ್ರೋಟಿನ್ ಹೆಚ್ಚಿರುವ ಆಹಾರ ಸೇವಿಸಬೇಕು.
ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನಿದ್ರೆಯು ಬಹಳ ಪ್ರಮುಖ ಪಾತ್ರವಹಿಸುತ್ತದೆ. ಆಹಾರ ಮತ್ತು ದೈಹಿಕ ಶ್ರಮದಲ್ಲಿ ಸರಿಯಾದ ಕ್ರಮ ಅನುಸರಿಸಿ ನಿದ್ದೆಯನ್ನು ಕಡೆಗಣಿಸಿದರೆ ದೇಹದ ತೂಕ ಇಳಿಕೆಗೆ ಕಷ್ಟವಾಗುತ್ತದೆ. ಹಗಲಿನ ವೇಳೆ ನಮ್ಮ ದೇಹದಲ್ಲಾಗುವ ತೊಂದರೆಗಳು ದೇಹ ನಿದ್ರಿಸುವ ವೇಳೆ ಸರಿಪಡಿಸುವ ಕೆಲಸ ಮಾಡುತ್ತದೆ. ಸ್ನಾಯುಗಳ ಸೆಳೆತ, ಮಾಂಸಖಂಡಗಳ ಬಲವರ್ಧನೆ, ಗಟ್ ಬ್ಯಾಕ್ಷೀರಿಯಾಗಳ ಬೆಳವಣಿಗೆ ಮುಂತಾದ ವಿಚಾರಗಳು ನಿದ್ರೆಯಲ್ಲಿ ಮಾತ್ರ ಸರಿಪಡಿಸಬಹುದು. ದಿನದಲ್ಲಿ ಸರಿಯಾಗಿ ಎಂಟು ಗಂಟೆಗಳ ಕಾಲ ನಿದ್ರಿಸಬೇಕು.
ಬಿಸಿನೀರಿಗೆ ಜೀರಿಗೆ ಸೇರಿಸಿ ಕುಡಿಯುವುದು
ನಮ್ಮ ದೇಹದಲ್ಲಿ ಟ್ರಿಲಿಯನ್ ಗಟ್ಟಲೆ ಜೀವಕೋಶಗಳಿಗೆ ಅವುಗಳಿಗೆ ನಮ್ಮಂತೆ ನಿತ್ಯವು ಆಹಾರ ಅಗತ್ಯವಾಗಿರುತ್ತದೆ. ನಾವು ಸೇವಿಸುವ ಆಹಾರ ಸಕ್ಕರೆ ರೂಪದಲ್ಲಿ ಪರಿವರ್ತನೆಗೊಂಡು ರಕ್ತದ ಮೂಲಕ ಜೀವಕೋಶಗಳಿಗೆ ಆಹಾರ ಪೂರೈಕೆಯಾಗುತ್ತದೆ. ಈ ಪ್ರಕ್ರಿಯೆಗೆ ಪೂರಕವಾಗಿ ಆಹಾರ ಸೇವಿಸುತ್ತಾ ತೂಕ ಇಳಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಬಿಸಿನೀರಿಗೆ ಜೀರಿಗೆ ಬೆರಸಿ ಕುಡಿಯುವುದು ತಪ್ಪಲ್ಲ ಆದರೆ ಕೆಲವು ಈ ಒಂದೇ ಕ್ರಮವನ್ನು ಅನುಸರಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಕ್ರಮವನ್ನು ವಾರದಲ್ಲಿ ಎರಡು ಸಲ ಮಾಡಿದರೆ ಸಾಕು.
ಜೇನುತಪ್ಪಕ್ಕೆ ಬಿಸಿನೀರು ಸೇರಿಸಿ ಕುಡಿಯುವುದು
ನಮ್ಮ ರಕ್ತದಲ್ಲಿನ ರಾಸಾಯನಿಕ ಪ್ರಕ್ರಿಯೆ ತುಂಬಾ ಸಮೀಪವಾದ ಮತ್ತು ಅದಕ್ಕೆ ಹೊಂದಿಕೊಳ್ಳುವ ಪದಾರ್ಥವೆಂದರೆ ಅದು ನೈಸರ್ಗಿಕವಾಗಿ ಸಿಗುವ ಜೇನುತುಪ್ಪ. ಈ ವಿಚಾರದಲ್ಲೂ ಕೆಲವರು ತಪ್ಪು ನಿರ್ಣಯಗಳನ್ನು ಮಾಡುತ್ತಾರೆ. ಜೇನುತಪ್ಪ ಸೇವಿಸುವುದರಿಂದ ಆರೋಗ್ಯ ಮತ್ತು ತೂಕದ ಮೇಲೆ ಪ್ರಭಾವ ಬೀರುತ್ತದೆ ಆದರೆ ಇದನ್ನು ನಿರಂತರವಾಗಿ ಮಾಡುವುದರಿಂದ ಕೆಟ್ಟ ಪರಿಣಾಮಗಳು ಸಹ ಬೀರುತ್ತವೆ. ಈ ಮೇಲೆ ತಿಳಿಸಿದಂತೆ ವಾರದಲ್ಲಿ ಎರಡರಿಂದ ಮೂರು ಸಲ ಜೇನುತಪ್ಪಕ್ಕೆ ಬಿಸಿನೀರು ಸೇರಿಸಿ ಕುಡಿಯಬಹುದು.
ನಾರಿನಾಂಶ ಆಹಾರ ಸೇವನೆ
ಇನ್ನು ಕೆಲವರು ವೇಗವಾಗಿ ತೂಕ ಇಳಿಸಿಕೊಳ್ಳುವ ಕಾರಣದಿಂದ ನಾರಿನಾಂಶವಿರುವ ಆಹಾರ ಮೊರೆ ಹೋಗುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಾದರೂ ಮಿತವಾಗಿ ಸೇವಿಸಬೇಕು. ನಾರಿನಾಂಶದಲ್ಲಿ ಹಲವು ಬಗೆಗಳಿವೆ. ನಮಗೆ ಮುಖ್ಯವಾಗಿ ನೀರಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗದ ನಾರಿನಾಂಶ ಅಗತ್ಯವಾಗಿರುತ್ತದೆ. ಇವೆರಡನ್ನು ಸಮತೋಲನ ಮಾಡಿ ಸೇವಿಸಬೇಕು. ನೀರಿನಲ್ಲಿ ಕರಗದ ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸುವುದರಿಂದ ಅದು ಅನಾರೋಗ್ಯ ಉಂಟು ಮಾಡುತ್ತದೆ. ಕರುಳಿನ ಚಲನೆಯಲ್ಲಿ ಅಡ್ಡಿ ಉಂಟು ಮಾಡಿ ಮಲಬದ್ದತೆಗೆ ಕಾರಣವಾಗಬಹುದು ಎಚ್ಚರಿಕೆ.
ಪ್ರೋಟಿನ್ ಗಾಗಿ ಗೋಧಿ ಹೆಚ್ಚು ಸೇವಿಸುವುದು
ತೂಕ ಇಳಿಕೆಯಲ್ಲಿ ಗೋಧಿ ಸೇವನೆ ಎಲ್ಲರೂ ಮಾಡುವ ಮೊದಲ ಮತ್ತು ಬಹು ದೊಡ್ಡ ತಪ್ಪು. ಗೋಧಿಯಲ್ಲಿ ಮಾತ್ರ ಪ್ರೋಟಿನ್ ಅಡಗಿಲ್ಲ ಇತರೆ ಬೇಳೆಕಾಳುಗಳಲ್ಲೂ ಪ್ರೋಟಿನ್ ಇದೆ. ಅದು ಗೋಧಿಯಲ್ಲಿ ದೊರೆಯುವ ಗ್ಲುಟೆನ್ ಪ್ರೋಟಿನ್ಗಿಂತ ೧೦೦ ಪಾಲು ಉತ್ತಮವಾಗಿರುತ್ತದೆ. ಗೋಧಿಯಲ್ಲಿ ದೊರೆಯುವ ಪ್ರೋಟೀನ್ ನಮ್ಮ ಕರುಳಿನ ಚಲನೆಗೆ ತೊಂದರೆ ಉಂಟು ಮಾಡುತ್ತದೆ. ಇದನ್ನು ಅತಿಯಾಗಿ ಸೇವಿಸದರೆ ಕರುಳು ಸೂಕ್ಷ್ಮ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.
ಅತಿಯಾಗಿ ನೀರು ಸೇವನೆ ಮಾಡುವುದು
ಕೆಲವರು ತೂಕ ಇಳಿಸಿಕೊಳ್ಳುವ ಉದ್ದೇಶದಿಂದ ನೀರನ್ನು ಹೆಚ್ಚಾಗಿ ಕುಡಿಯುತ್ತಾರೆ. ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನೀರು ನೆರವಾಗುತ್ತದೆ. ಆದರೆ ಅದನ್ನು ಹೆಚ್ಚಾಗಿ ಸೇವಿಸಬಾರದು. ದಿನಕ್ಕೆ 2 ರಿಂದ 2.5 ಲೀಟರ್ ನೀರು ಕುಡಿಯುವುದು ಒಳ್ಳೆಯದು. ಅತಿಯಾದ ನೀರು ಸೇವನೆ ಮೆದುಳಿನಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿಸಿ ಮೆದುಳು ಊತ ಬರುವ ಸಾಧ್ಯತೆ ಹೆಚ್ಚಿಸುತ್ತದೆ. ಅಲ್ಲದೆ ಕಿಡ್ನಿಗಳ ಮೇಲೆ ಅನಗತ್ಯ ಒತ್ತಡ ಉಂಟು ಮಾಡುತ್ತದೆ. ರಕ್ತ ತುಂಬಾ ತೆಳು ರೂಪಕ್ಕೆ ಬರುತ್ತದೆ ಆದ್ದರಿಂದ ಮಿತವಾಗಿ ಸೇವಿಸಿ. ಸೊಪ್ಪು, ತರಕಾರಿ, ಹಣ್ಣುಗಳು, ಡ್ರೈಪ್ರೂಟ್ಸ್, ಸಮುದ್ರದ ಆಹಾರ, ಮಾಂಸ, ಮೊಟ್ಟೆ ಹೀಗೆ ಹಲವು ಬಗೆಯ ಆಹಾರಗಳನ್ನು ಸೇವಿಸಿ. ಒಂದು ದಿನ ಸೇವಿಸಿದ ತರಕಾರಿ ಮರುದಿನ ಸೇವಿಸಬೇಡಿ ಕನಿಷ್ಟ ನಾಲ್ಕು ದಿನ ಅಂತರ ಕಾಯ್ದುಕೊಳ್ಳಿ. ತರಕಾರಿ ಮಾತ್ರವಲ್ಲ ಯಾವುದೇ ಆಹಾರವನ್ನೇ ಆಗಲಿ ಸೇವಿಸುವ ಉತ್ತಮ ಕ್ರಮ ಇದು.