ನ್ಯೂಸ್ ನಾಟೌಟ್: ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಹಸಿ ತರಕಾರಿಗಳಿಂದ ಅನೇಕ ಪ್ರಯೋಜನಗಳನ್ನು ದೊರೆಕುತ್ತದೆ. ಅದೇ ರೀತಿ ಈ ಕ್ಯಾರೆಟ್ ತಿಂದರೆ ಅದರಿಂದ ಏನೆಲ್ಲಾ ಪ್ರಯೋಜನ ಆಗುತ್ತದೆ ಎಂದು ತಿಳಿಯೋಣ.
ಕ್ಯಾರೆಟ್ ಚಳಿಗಾಲಕ್ಕೆ ಉತ್ತಮ ತರಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ಯಾರೆಟ್ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಬಹುತೇಕರು ಕ್ಯಾರೆಟ್ ತಿನ್ನಲು ಇಷ್ಟಪಡುತ್ತಾರೆ. ಕ್ಯಾರೆಟ್ ಅನ್ನು ಹಸಿಯಾಗಿಯೂ ತಿನ್ನಬಹುದು . ಸಾಂಬರ್ ಪದಾರ್ಥಗಳನ್ನು ಮಾಡಿ ಸಹ ಸೇವಿಸಬಹುದು. ಹಾಗೆಯೇ ಸಲಾಡ್ ಮಾಡಿ ತಿನ್ನುವುದು ಉತ್ತಮ ರುಚಿ ನೀಡುತ್ತದೆ. ಕ್ಯಾರೆಟ್ ನಲ್ಲಿ ಪೋಷಕಾಂಶಗಳ ಕೊರತೆಯಿಲ್ಲ, ವಿಟಮಿನ್ಗಳು, ಖನಿಜಗಳು ಮತ್ತು ಫೈಬರ್ಗಳು ಸಹ ಸಾಕಷ್ಟಿವೆ. ಇದು ದೇಹಕ್ಕೆ ಎಲ್ಲಾ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.
ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ
ವಿಟಮಿನ್ ಎ ಕ್ಯಾರೆಟ್ನಲ್ಲಿ ಸಾಕಷ್ಟು ಕಂಡುಬರುತ್ತದೆ. ಇದು ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಾತ್ರಿ ಕುರುಡುತನದ ಅಪಾಯವನ್ನು ತಪ್ಪಿಸುತ್ತದೆ.
ರಕ್ತದಲ್ಲಿನ ಸಕ್ಕರೆಮಟ್ಟ ನಿಯಂತ್ರಿಸುತ್ತದೆ
ಮಧುಮೇಹಿಗಳಿಗೆ ಕ್ಯಾರೆಟ್ ವರದಾನವಿದ್ದಂತೆ. ಕರಗುವ ಫೈಬರ್ ಗಳು ಮತ್ತು ಕ್ಯಾರೊಟಿನಾಯ್ಡ್ ಗಳುಇದರಲ್ಲಿ ಕಂಡುಬರುತ್ತವೆ, ಇದು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ನಿರ್ವಹಿಸುತ್ತದೆ.
ಹೃದ್ರೋಗ ತಡೆಗಟ್ಟುವಿಕೆ
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕ್ಯಾರೆಟ್ ಅನ್ನು ತಿನ್ನಬೇಕು. ಇದರಲ್ಲಿ ಆಂಟಿಆಕ್ಸಿಡೆಂಟ್ಗಳು ಹೆಚ್ಚಾಗಿ ಕಂಡುಬರುತ್ತವೆ, ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೃದಯಾಘಾತದಂತಹ ಕಾಯಿಲೆಗಳ ಅಪಾಯವನ್ನು ತಪ್ಪಿಸುತ್ತದೆ
ತೂಕ ನಷ್ಟಕ್ಕೆ ಪ್ರಯೋಜನಕಾರಿ
ಕ್ಯಾರೆಟ್ ಒಂದು ಪರಿಪೂರ್ಣ ತೂಕ ನಷ್ಟ ಆಹಾರವಾಗಿದೆ. ಇದು ಕರಗುವ ಮತ್ತು ಕರಗದ ಫೈಬರ್ ಎರಡನ್ನೂ ಹೊಂದಿರುತ್ತದೆ, ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದನ್ನು ಸೇವಿಸಿದರೆ ಬೇಗನೆ ಹಸಿವು ಆಗುವುದಿಲ್ಲ. ಈ ಕಾರಣದಿಂದ ತೂಕ ನಷ್ಟವಾಗಲು ಪ್ರಾರಂಭವಾಗುತ್ತದೆ.