ನ್ಯೂಸ್ ನಾಟೌಟ್ : ಇದುವರೆಗೆ ನೀವು ಹಣವನ್ನು ಎಟಿಎಂನಲ್ಲಿ ಡ್ರಾ ಮಾಡಿದ್ದೀರಿ. ಇದೀಗ ಚಿನ್ನವನ್ನೂ ಕೂಡ ಎಟಿಎಂ ಕಾರ್ಡ್ ಬಳಸಿ ಡ್ರಾ ಮಾಡಿಕೊಳ್ಳಬಹುದು. ಇಂತಹದ್ದೊಂದು ಹೊಸ ಎಟಿಎಂ ಮೆಷಿನ್ ಉದ್ಘಾಟನೆ ಕಂಡಿದ್ದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿದೆ.
ಅಂದ ಹಾಗೆ ಇದು ಉದ್ಘಾಟನೆಗೊಂಡಿರುವುದು ಹೈದಾರಾಬಾದ್ ನ ಬೇಗಂಪೇಟೆಯಲ್ಲಿ. ಇದು ದೇಶದಲ್ಲೇ ಮೊದಲ ಬಾರಿಗೆ ಚಿನ್ನದ ಎಟಿಎಂ ಎಂಬ ಖ್ಯಾತಿಗೆ ಪಾತ್ರವಾಗಿದೆ. ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮಾ ರೆಡ್ಡಿ ಅವರು ನೂತನ ಚಿನ್ನದ ಎಟಿಎಂ ಅನ್ನು ಸೋಮವಾರ ಉದ್ಘಾಟಿಸಿದರು.
ಗೋಲ್ಡ್ ಸಿಕ್ಕಾ ಕಂಪನಿಯ ಕಚೇರಿಯು ಇದು ಮೊದಲ ಬಾರಿಗೆ ಪ್ರಯತ್ನವನ್ನು ಮಾಡಿದ್ದಾರೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಳಸಿಕೊಂಡು ನೀವು ಚಿನ್ನವನ್ನು ಡ್ರಾ ಮಾಡಬಹುದಾಗಿದೆ. ಇದು ಶೇ. ೯೯. ೯೯. ರಷ್ಟು ಪರಿಶುದ್ದತೆಯ ೦.೫, ೧, ೨, ೫, ೧೦, ೨೦, ೫೦, ಮತ್ತು ೧೦೦ ಗ್ರಾಂ. ತೂಕದ ನಾಣ್ಯಗಳನ್ನು ಡ್ರಾ ಮಾಡಬಹುದು. ಚಿನ್ನದ ಜೊತೆಗೆ ಅದರ ಗುಣಮಟ್ಟ ಖಚಿತಪಡಿಸಲು ದಾಖಲೆಗಳನ್ನು ಸಹ ನೀಡಲಾಗುತ್ತದೆ . ದೇಶಾದ್ಯಂತ ಸುಮಾರು ೩೦೦೦ ಎಟಿಎಂ ಗಳನ್ನು ಸ್ಥಾಪಿಸಲು ಯೋಜಿಸಿದೆ. ಅಲ್ಲದೆ ಶೇ. ೭೦ ರಷ್ಟು ಭಾಗ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲಿದೆ ಎಂದು ಗೋಲ್ಡ್ ಸಿಕ್ಕಾ ಕಂಪನಿಯ ಸಿಇಒ ಸೈಯದ್ ತರುಜ್ ತಿಳಿಸಿದ್ದಾರೆ. ಈ ಗೋಲ್ಡ್ ಎಟಿಎಂನಲ್ಲಿ ಗೋಲ್ಡ್ ಕಾಯಿನ್ಗಳನ್ನು ಪಡೆಯಬಹುದಾಗಿದೆ. ೦.೫ ಗ್ರಾಂನಿಂದ ೧೦೦ ಗ್ರಾಂ. ತನಕ ಕಾಯಿನ್ ಗಳನ್ನು ಕಾರ್ಡ್ ಬಳಸಿ ಪಡೆಯಬಹುದಾಗಿದೆ.