ನ್ಯೂಸ್ ನಾಟೌಟ್: ಹಸುವಿನ ಹಾಲು ಕುಡಿದರೆ ಆರೋಗ್ಯ ಉತ್ತಮವಾಗಿರುತ್ತದೆ, ಸದೃಢವಾಗಿರಬಹುದು ಅನ್ನುವ ನಂಬಿಕೆ ಇದೆ. ಇದೀಗ ಮೇಕೆಯ ಹಾಲಿನಲ್ಲಿಯೂ ಅತ್ಯಂತ ಹೆಚ್ಚಿನ ಜೀವಸತ್ವ ಇದೆ. ಮಾನವನ ದೇಹಕ್ಕೆ ಅತ್ಯಂತ ಪರಿಣಾಮಕಾರಿಯಾದ ಶಕ್ತಿಯನ್ನು ನೀಡುತ್ತದೆ ಅನ್ನುವುದು ಸಂಶೋಧನೆಯಿಂದ ಬಹಿರಂಗಗೊಂಡಿದೆ.
ಮೇಕೆ ಹಾಲು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಮೇಕೆ ಹಾಲು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ . ಈ ಬಗ್ಗೆ ಹಲವಾರು ಜನರಿಗೆ ಮಾಹಿತಿ ಗೊತ್ತಿಲ್ಲ. ಆದರೆ, ನಿಜಕ್ಕೂ ಮೇಕೆ ಹಾಲಿನ ಸೇವನೆ ಹಲವು ರೋಗಗಳಿಂದ ನಿಮಗೆ ಪರಿಹಾರ ನೀಡುತ್ತದೆ. ತಜ್ಞರ ಪ್ರಕಾರ, ವಿಶ್ವದ ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ಜನರು ಮೇಕೆ ಹಾಲನ್ನು ಮಾತ್ರ ಸೇವಿಸುತ್ತಾರೆ. ಮೇಕೆ ಹಾಲು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಡೆಂಗ್ಯೂನಂತಹ ಅಪಾಯಕಾರಿ ಕಾಯಿಲೆಗಳನ್ನು ಹೋಗಲಾಡಿಸುವಲ್ಲಿ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಮೇಕೆ ಹಾಲು ಹಸುವಿನ ಹಾಲಿಗಿಂತ ದಪ್ಪವಾಗಿರುತ್ತದೆ. ಆದರೆ, ಮೇಕೆ ಹಾಲನ್ನು ಯಾವಾಗಲೂ ಆರೋಗ್ಯ ತಜ್ಞರ ಸಲಹೆ ಮೇರೆಗೆ ಸೇವಿಸಬೇಕು. ನಾವಾಗಿಯೇ ಸುಮ್ಮ, ಸುಮ್ಮನೇ ಅದನ್ನು ಸೇವಿಸುವ ಹಾಗಿಲ್ಲ.
ಮೇಕೆ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ ಇದನ್ನು ನೀವು ಮಕ್ಕಳಿಗೆ ಸಹ ಕೊಡಬಹುದು. ಆದರೆ, ವೈದ್ಯರ ಬಳಿ ಚರ್ಚಿಸಿ ನಂತರ ಮಕ್ಕಳಿಗೆ ಕೊಡುವುದು ಉತ್ತಮ. ನೀವು ಗಮನಿಸಿರಬಹುದು ಕೆಲವರಿಗೆ ಹಾಲಿನ ಅಲರ್ಜಿ ಇರುತ್ತದೆ. ಆದರೆ, ಈ ಹಾಲಿಗೆ ಅಲರ್ಜಿಯ ಅಪಾಯ ಕಡಿಮೆ. ಇದನ್ನು ಹಸುವಿನ ಹಾಲಿನ ಅಲರ್ಜಿ ಇರುವವರು ಸಹ ಸೇವಿಸಬಹುದು. ಇದು ಹೃದ್ರೋಗದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮುಖ್ಯವಾಗಿ ಇದನ್ನು ಸೇವಿಸುವುದು ಉತ್ತಮ. ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡಲು ಈ ಹಾಲು ಪರಿಣಾಮಕಾರಿ ಎಂದು ಹಲವು ಅಧ್ಯಯನಗಳು ಸಾಬೀತು ಮಾಡಿದೆ.ಮೇಕೆ ಹಾಲಿನ ಸೇವನೆಯಿಂದ ನಿಮ್ಮ ಮೂಳೆಗಳ ಶಕ್ತಿ ಹೆಚ್ಚಾಗುತ್ತದೆ, ಯಾವುದೇ ಸಮಸ್ಯೆ ಇದ್ದರೂ ಸಹ ಪರಿಹಾರವಾಗುತ್ತದೆ.
ಮೊದಲೇ ಹೇಳಿದಂತೆ ಮಾನಸಿಕ ಆರೋಗ್ಯವನ್ನು ಕಾಪಾಡಲು ಈ ಹಾಲು ಸಹಾಯ ಮಾಡುತ್ತದೆ. ಈ ಹಾಲು ಆತಂಕವನ್ನೂ ಸಹ ಕಡಿಮೆ ಮಾಡುತ್ತದೆ. ಮೇಕೆ ಹಾಲಿನಲ್ಲಿ ವಿಟಮಿನ್ ‘ಎ’ ಸಮೃದ್ಧವಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಕಣ್ಣಿನ ಪೊರೆ ಮತ್ತು ಕ್ಯಾನ್ಸರ್ ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದಡಾರದ ಸಂದರ್ಭದಲ್ಲಿ ಮಕ್ಕಳಿಗೆ ಆಡಿನ ಹಾಲನ್ನು ನೀಡುವಂತೆ ಹಲವು ಬಾರಿ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ನೀವು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೆ ಮೇಕೆ ಹಾಲು ಅದನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ. ಮೇಕೆ ಹಾಲು ಪಿತ್ತಕೋಶದಲ್ಲಿ ಸಂಗ್ರಹವಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಮಾಹಿತಿ ಪ್ರಕಾರ ಆಡಿನ ಹಾಲನ್ನು ಕುಡಿಯುವುದರಿಂದ ದೇಹದ ಅಧಿಕ ಕೊಬ್ಬನ್ನು ಕಡಿಮೆ ಮಾಡಬಹುದು ಮತ್ತು ತೂಕವನ್ನು ನಿಯಂತ್ರಣದಲ್ಲಿಡಬಹುದು. ಪ್ರತಿನಿತ್ಯ ಆಡಿನ ಹಾಲನ್ನು ಸೇವಿಸುವುದರಿಂದ ಹೃದ್ರೋಗ, ಪಾರ್ಶ್ವವಾಯು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಂತೆಯೇ ಈ ಹಾಲು ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಆಡಿನ ಹಾಲಿನಲ್ಲಿ ಕಬ್ಬಿಣದ ಅಂಶ ಅಧಿಕವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸಹ ಹೆಚ್ಚಿಸುತ್ತದೆ. ಮೇಕೆ ಮತ್ತು ಹಸುವಿನ ಹಾಲಿನಲ್ಲಿ ಲ್ಯಾಕ್ಟೋಸ್ ಅಧಿಕವಾಗಿರುತ್ತದೆ. ಆಡಿನ ಹಾಲಿನಲ್ಲಿ 100 ಗ್ರಾಂ. ಗೆ 4.1 ಗ್ರಾಂ ಲ್ಯಾಕ್ಟೋಸ್ ಇರುತ್ತದೆ, ಆದರೆ ಹಸುವಿನ ಹಾಲಿನಲ್ಲಿ 4.6 ಗ್ರಾಂ ಲ್ಯಾಕ್ಟೋಸ್ (18) ಇರುತ್ತದೆ.