ನ್ಯೂಸ್ ನಾಟೌಟ್ : ಇದೀಗ ಎಲ್ಲೆಡೆ ಸದ್ದು ಮಾಡುತ್ತಿರುವ ಕಾಂತಾರ ಚಿತ್ರ ಪ್ರೇಕ್ಷರಿಗೂ ಅಚ್ಚರಿ ಮೂಡಿಸುವಂತೆ ಮಾಡಿದೆ. ಈ ಚಿತ್ರಕ್ಕೆ ಬಜೆಟ್ ಆದರೂ ಎಷ್ಟು…? ಲಾಭ ಗಳಿಸಿದ್ದು ಆದರೂ ಎಷ್ಟು ಅನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ.
ವಿಶ್ವದಲ್ಲೇ ಜನಮನ ಗೆದ್ದ ಸೂಪರ್ ಹಿಟ್ ಮೂವಿ “ ಕಾಂತಾರ” ಇದೀಗ ಬಾರಿ ಸದ್ದು ಮಾಡಿದೆ. ಕರಾವಳಿಯ ಸಂಸ್ಕೃತಿ ಕಲೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ಈ ಮೂವಿ ವಿಶೇಷವಾಗಿ ತುಳುನಾಡಿನ ದೈವಾರಾಧನೆ ಕುರಿತು ಕಥೆ ಹೇಳುತ್ತದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ತೆರೆ ಕಂಡಿದ್ದು ಸಿನಿ ಪ್ರಿಯರ ಮೆಚ್ಚುಗೆಗೂ ಪಾತ್ರವಾಗಿದೆ.ಸದ್ಯ ಈ ಸಿನಿಮಾ ಒಟಿಟಿಯಲ್ಲೂ ಸದ್ದು ಮಾಡುತ್ತಿದ್ದು, ಕಾಂತರ ಮೂವಿಗೆ ಹಾಕಿದ ಬಜೆಟ್ ಗಿಂತ ಅದರ ಗಳಿಕೆ ಕಂಡು ಜನರು ಆಶ್ಚರ್ಯ ಪಟ್ಟಿದ್ದಾರೆ.ಕೆಜಿಎಫ್,ಪುಷ್ಟ ಮೂವಿ ಭರ್ಜರಿ ಕಲೆಕ್ಷನ್ ಮಾಡಿತ್ತು ಎಂದು ಹೇಳಲಾಗುತ್ತಿತ್ತು.ಆದರೆ ಕಾಂತಾರಾ ಕಲೆಕ್ಷನ್ ವಿಚಾರದಲ್ಲಿ ಅವೆಲ್ಲವನ್ನು ಹಿಂದಿಕ್ಕಿ ಬಾಕ್ಸಾಫೀಸನ್ನು ಕೊಳ್ಳೆ ಹೊಡೆದಿದೆ.
ಕಾಂತಾರ ಬಜೆಟ್ ಎಷ್ಟು…?
ಕಾಂತಾರ ಸಿನಿಮಾಕ್ಕೆ ಕೇವಲ 15 ಕೋಟಿ ರೂಪಾಯಿ ಖರ್ಚಾಗಿತ್ತು.ಇದೀಗ ಕನ್ನಡದಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ ಈ ಸಿನಿಮಾ. ಚಿತ್ರದ ಒಟ್ಟಾರೆ ಕಲೆಕ್ಷನ್ 400 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ಆದರೆ ಗಳಿಕೆ 406 ಕೋಟಿ ರುಪಾಯಿ ಆಗಿದೆ ಎಂದು ತಿಳಿದು ಬಂದಿದೆ. ಈ ಚಿತ್ರದ ಒಟಿಟಿ ಹಕ್ಕು ಹಾಗೂ ಟಿವಿ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟವಾಗಿದೆ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್ ಗೆ ದೊಡ್ಡ ಮಟ್ಟದ ಲಾಭವಾಗಿದೆ.
ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ , ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಆದರೆ ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿತ್ತು.
ರಿಷಬ್ ಶೆಟ್ಟಿಗೆಷ್ಟು ಸಂಭಾವನೆ ?
ಈ ಚಿತ್ರದಲ್ಲಿ ಕಿಶೋರ್ ಗೆ 1ಕೋಟಿ , ಪ್ರಮೋದ್ ಶೆಟ್ಟಿ 60 ಲಕ್ಷ, ಅಚ್ಯುತ್ ಕುಮಾರ್ 40 ಲಕ್ಷ, ಸಪ್ತಮಿ ಗೌಡ 1 ಕೋಟಿ, ಸಂಭಾವನೆ ಪಡೆದಿದ್ದಾರೆ. ಈ ಸಿನಿಮಾದಲ್ಲಿ ನಟನೆಯಲ್ಲಿ ಮುಖ್ಯ ಪಾತ್ರವಾಗಿ ಕಾಣಿಸಿಕೊಂಡ ರಿಷಬ್ ಶೆಟ್ಟಿ ಈ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅವರು ಈ ಸಿನಿಮಾದಿಂದ 4 ಕೊಟಿ ರುಪಾಯಿ ಪಡೆದಿದ್ದಾರೆ ಎನ್ನಲಾಗಿದೆ.