ನ್ಯೂಸ್ ನಾಟೌಟ್: ಡ್ರೈಫ್ರೂಟ್ಸ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ಡ್ರೈ ಫ್ರೂಟ್ಸ್ ಸೇವನೆ ಮಾಡಿದ್ರೆ ನೀವು ದಿನವೀಡಿ ಶಕ್ತಿ ಪಡೆಯುತ್ತೀರಿ. ಡ್ರೈಫ್ರೂಟ್ಸ್ ಅದ್ಭುತ ಪ್ರಯೋಜನ ಕೊಡುವುದರಲ್ಲಿ ವಾಲ್ನಟ್ ಕೂಡ ಒಂದು. ಇದು ಕರುಳಿನ ಆರೋಗ್ಯ ಮತ್ತು ಅಧ್ಯಯನದ ಒತ್ತಡ ಹಾಗೂ ನಕಾರಾತ್ಮಕತೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಮಹಿಳೆಯರ ಮೇಲೆ ಇದು ಹೆಚ್ಚಿನ ಪರಿಣಾಮ ಹೊಂದಿದೆ.
ವಾಲ್ನಟ್ ಮಕ್ಕಳು ಹಾಗು ವಿದ್ಯಾರ್ಥಿಗಳು ತಿನ್ನುವುದರಿಂದ ಉತ್ತಮ ಪ್ರಯೋಜಗಳನ್ನು ಪಡೆದುಕೊಳ್ಳಬಹುದು. ಪರೀಕ್ಷೆಗೆ ಇನ್ನೇನು ವಾರ ಉಳಿದಿದೆ ಎಂದಾಗ ವಿದ್ಯಾರ್ಥಿಗಳಲ್ಲಿ ಆತಂಕ ಮೂಡುವುದು ಸಹಜ. ಈ ಆತಂಕ ನಿವಾರಣೆಗೆ ವಿದ್ಯಾರ್ಥಿಗಳು ತಮ್ಮ ಡಯಟ್ನಲ್ಲಿ ವಾಲ್ನಟ್ ಸೇರಿಸುವುದು ಒಳ್ಳೆಯದು ಎಂಬುದನ್ನು ಇತ್ತೀಚಿಗಿನ ಕ್ಲಿನಿಕಲ್ ಸಂಶೋಧನೆಯೊಂದು ತಿಳಿಸಿದೆ. ಪದವಿ ಪೂರ್ವ ವಿದ್ಯಾರ್ಥಿಗಳು ಅಧ್ಯಯನ ಸಮಯದಲ್ಲಿ ವಾಲ್ನಟ್ ಸೇವನೆಯು ಅವರ ಮಾನಸಿಕ ಆರೋಗ್ಯ ಮತ್ತು ಸಾಮಾನ್ಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂಬುದು ತಿಳಿದು ಬಂದಿದೆ. ಪ್ರತಿನಿತ್ಯ ಅರ್ಧ ಕಪ್ ವಾಲ್ನಟ್ ಸೇವಿಸುವವರಲ್ಲಿ ಮಾಸಿಕ ಆರೋಗ್ಯ ಅಭಿವೃದ್ಧಿ ಕಾಣಬಹುದಾಗಿದೆ. ಜೊತೆಗೆ ಮೆಟಾಬಾಲಿಕ್ ಬಯೋಮಾರ್ಕ್ ಗಳ ಅಭಿವೃದ್ಧಿ ಹಾಗೂ ದೀರ್ಘಕಾಲದ ಉತ್ತಮ ಗುಣಮಟ್ಟದ ನಿದ್ದೆಯನ್ನು ಕಾಣಬಹುದಾಗಿದೆ.
ವಾಲ್ನಟ್ ಕರುಳಿನ ಆರೋಗ್ಯ ಮತ್ತು ಅಧ್ಯಯನದ ಒತ್ತಡ ಹಾಗೂ ನಕಾರಾತ್ಮಕತೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಮಹಿಳೆಯರ ಮೇಲೆ ಇದು ಹೆಚ್ಚಿನ ಪರಿಣಾಮ ಹೊಂದಿದೆ. ವಾಲ್ನಟ್ ಮೆದುಳಿನ ಶಕ್ತಿ ಅಭಿವೃದ್ಧಿ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಾಲ್ನಟ್ನಲ್ಲಿ ಒಮೆಗಾ-3 ಪ್ಯಾಟಿ ಆ್ಯಸಿಡ್, ಆ್ಯಂಟಿಅಕ್ಸಿಡೆಂಟ್ ಜೊತೆಗೆ ಮೆಲಟೊನಿನ್ ಇರುತ್ತದೆ. ಪೊಲಿಫನೊಲ್ಸ್, ವಿಟಮಿನ್ ಇ ಅಂಶಗಳು ಮಿದುಳು ಮತ್ತು ಕರುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಕನಿಷ್ಠ 75 ಪ್ರತಿಶತದಷ್ಟು ಮಾನಸಿಕ ಆರೋಗ್ಯ ಅಸ್ವಸ್ಥತೆಗಳು 24 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತವೆ ಎಂದು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಮಾನಸಿಕ ಅಸ್ವಸ್ಥತೆ ಸಾಮಾನ್ಯವಾಗಿದ್ದು, ಇದು ಅನೇಕ ಪರಿಣಾಮಕ್ಕೆ ಕಾರಣವಾಗುತ್ತಿದೆ. ಒತ್ತಡದ ಅವಧಿಯಲ್ಲಿ ವಾಲ್ನಟ್ ಸೇವಿಸುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ವಾಲ್ನಟ್ ಅನ್ನು ರುಚಿಕರ ತಿನಿಸುಗಳ ರೂಪದಲ್ಲಿ ಸೇವಿಸಬಹುದಾಗಿದೆ ಎಂದು ತಿಳಿದು ಬಂದಿದೆ.