ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿಯೋರ್ವನಿಗೆ ಅನ್ಯಕೋಮಿನ ನಾಲ್ವರು ವಿದ್ಯಾರ್ಥಿಗಳು ಥಳಿಸಿದ್ದ ಘಟನೆ ಮಂಗಳೂರಿನಲ್ಲಿ ನಡೆದಿತ್ತು.ಇದೀಗ ಅದರ ಬೆನ್ನಲ್ಲೇ ಅನ್ಯಕೋಮಿನ ಯುವಕನೋರ್ವ ವಾಹನದಲ್ಲಿ ಪಾರ್ಸೆಲ್ ನೀಡಲು ಬಂದಿದ್ದ ಅಯ್ಯಪ್ಪ ಮಾಲಾಧಾರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ನಿಂದಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ?
ಬಂಟ್ವಾಳದ ಮೂಡ ಗ್ರಾಮದ ಗೂಡಿನ ಬಳಿಯ ನಿವಾಸಿ ಮೀನು ವ್ಯಾಪಾರಿ ಇಕ್ಬಾಲ್ ಎಂಬಾತನು ಅಯ್ಯಪ್ಪ ಮಾಲಾಧಾರಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಯಶ್ಚಿತ್ ಎಂಬವರು ಅಯ್ಯಪ್ಪ ಮಾಲಾಧಾರಿಯಾಗಿದ್ದು, ಸ್ನೇಹಿತನ ಜೊತೆ ರಿಕ್ಷಾ ಟೆಂಪೋದಲ್ಲಿ ಪಾರ್ಸೆಲ್ ಸರ್ವೀಸ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗೂಡಿನ ಬಳಿ ಸಮೀಪ ಪಾರ್ಸೆಲ್ ಒಂದನ್ನು ನೀಡಲು ತೆರಳಿದ ವೇಳೆ ಇಕ್ಬಾಲ್ ಇದು ನಮ್ಮ ಏರಿಯಾ, ಈ ಭಾಗಕ್ಕೆ ಹಿಂದೂಗಳು ಬರಬಾರದು ಎಂದು ಮಾತೆತ್ತಿದ್ದಾನೆ. ಇಷ್ಷು ಹೇಳಿದಲ್ಲದೆ ಅಯಪ್ಪ ವೃತಧಾರಿಗಳ ಬಗ್ಗೆ ನಿಂದನೆಯ ಮಾತುಗಳನ್ನು ಆಡಿದ್ದಾನೆ. ಜತೆಗೆ ಬೈದು , ಜೀವ ಬೆದರಿಕೆ ಹಾಕಿದ್ದಾನೆ ಎಂದು ಅಯ್ಯಪ್ಪ ಮಾಲಾಧಾರಿ ಹೇಳಿದ್ದಾರೆ.
ಈ ಕುರಿತು ಯಶ್ಚಿತ್ ಅಯ್ಯಪ್ಪ ಮಾಲಾಧಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.