ನ್ಯೂಸ್ ನಾಟೌಟ್ : ಕೆಲಸವಿಲ್ಲದೆ ಏರಿಯಾ ಸುತ್ತಾಡಿಕೊಂಡು ಮನೆಯಲ್ಲಿದ್ದ. ಆತನಿಗೆ ಒಬ್ಬಳು ಪ್ರೇಯಸಿಯಿದ್ದಳು. ಆಕೆ ಆಸೆಯನ್ನು ಈಡೇರಿಸಲು ಈತ ಮನೆಯಲ್ಲಿದ್ದ ಚಿನ್ನ ಕದ್ದು ಸುತ್ತಾಡಿಸಲು ಕರೆದುಕೊಂಡ ಹೋದ ವೇಳೆಯಲ್ಲಿ ಪೋಲಿಸರ ಕೈಗೆ ತಗಲಾಕ್ಕ್ಹೊಂಡ ಮಹಮ್ಮದ್ ಇರ್ಫಾನ್ !
103 ಗ್ರಾಮ್ ಚಿನ್ನ ಯಾರದ್ದು?
ಮಹಮ್ಮದ್ ಇರ್ಫಾನ್ ಬೆಂಗಳೂರಿನ ಆಡುಗೋಡಿ ನಿವಾಸಿ . ತಾಯಿ, ಅಣ್ಣ ಹಾಗೂ ಅತ್ತಿಗೆ ಜತೆಗೆ ಮನೆಯಲ್ಲಿ ವಾಸವಿದ್ದ. ಈತನಿಗೆ ಏನು ಕೆಲಸವಿರಲ್ಲ. ಮನೆಯಲ್ಲಿ ಮೂರು ಹೊತ್ತು ಊಟ ಮಾಡ್ಕೊಂಡು, ಪ್ರೇಯಸಿ ಜತೆ ಸುತ್ತಾಡಿಕೊಂಡು ಆರಾಮವಾಗಿದ್ದ. ಒಮ್ಮೆ ಪ್ರೇಯಸಿ ಜತೆಗೆ ನಿನ್ನಾಸೆ ಏನು? ಎಂದು ಕೇಳಿದ್ದಾನೆ. ಆಕೆ ಗೋವಾಗೆ ಹೋಗುವ ಆಸೆ ಇದೆ ಎಂದು ಹೇಳಿದ್ದಾಳೆ. ಇದನ್ನು ಗಂಭೀರವಾಗಿ ತೆಗೆದು ಕೊಂಡ ಇರ್ಫಾನ್ ಹಣ ಹೊಂದಾಣಿಕೆಗೆ ಶುರು ಮಾಡಿದ್ದಾನೆ.ಅವಳ ಆಸೆಯಂತೆ ಗೋವಾಕ್ಕೆ ಹೋಗಲು ರೆಡಿಯಾದ. ಏನು ಮಾಡಿದ್ರೂ ದುಡ್ಡು ಹೊಂದಿಸುವುದಕ್ಕೆ ಕಷ್ಟವಾಯಿತು. ಆತನ ಜತೆ ನಯಾ ಪೈಸೆ ಇರಲಿಲ್ಲ. ಮುಂದೇನು ಎಂದು ಯೋಚನೆ ಮಾಡಿದಾಗ ಮನೆಯಲ್ಲೆ ಇದ್ದ ಚಿನ್ನ ನೆನಪಾಯ್ತು.ರಾತ್ರಿ ಎಲ್ಲರೂ ಮಲಗಿದ ವೇಳೆ 103 ಗ್ರಾಮ್ ಚಿನ್ನಾಭರಣ ಎಗರಿಸಿಯೇ ಬಿಟ್ಟ. ಬಳಿಕ ಗಿರವಿ ಅಂಗಡಿಯಲ್ಲಿಟ್ಟು ಲಕ್ಷ ಹಣ ತೆಗೆದುಕೊಂಡು ಪ್ರೇಯಸಿ ಜತೆಗೆ ಗೋವಾಗೆ ಹೊರಟು ಪ್ರೇಯಸಿ ಕನಸು ನನಸು ಮಾಡಿಬಿಟ್ಟ.
ಆತ ಹೇಗೆ ಸಿಕ್ಕಿಬಿದ್ದ?
ಮನೆಯಲ್ಲಿ ಚಿನ್ನ ಕಾಣೆಯಾಗಿದೆ ಎಂದು ಇರ್ಫಾನ್ ಅಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಜರ್ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಆ ಮನೆಯಲ್ಲಿ ಇರ್ಫಾನ್ ಇಲ್ಲದೆ ಇರುವುದರಿಂದ ಪೊಲೀಸರಿಗೆ ಆತನ ಮೇಲೆ ಡೌಟ್ ಬಂದಿದೆ. ಆಗ ಮನೆಯವರು ಆತ ಗೆಳೆಯರ ಜತೆಗೆ ಗೋವಾಕ್ಕೆ ಹೋಗಿದ್ದಾನೆ ಎಂದು ತಿಳಿಸಿದ್ದಾರೆ. ಕೂಡಲೇ ಪೊಲೀಸರ ತಂಡವೊಂದು ತನಿಖೆ ನಡೆಸಿದಾಗ ಇರ್ಫಾನ್ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.ಪೊಲೀಸರು ಗೋವಾದಿಂದ ಇರ್ಫಾನ್ ನನ್ನು ಕರೆತಂದು ಆತ ಗಿರವಿಯಿಟ್ಟಿದ್ದ ಚಿನ್ನವನ್ನು ರಿಕವರಿ ಮಾಡಿದ್ದಾರೆ. ಆದ್ರೆ ಪ್ರೇಯಸಿಯ ಬಯಕೆ ತೀರಿಸಲು ತಾನಿದ್ದ ಮನೆಗೆ ಕನ್ನ ಹಾಕಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.