ನ್ಯೂಸ್ ನಾಟೌಟ್ : ಕರೋನಾ ಭೀತಿ ಹಿನ್ನಲೆ ರಾಜ್ಯದಲ್ಲಿ ಅವಧಿ ಪೂರ್ವ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಚುನಾವಣೆ ಎದುರಿಸಲು ಸಿದ್ದರಾಗಿ ಎಂಬ ಸಂದೇಶವನ್ನು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯ ಅವಧಿ ಮೇ ತಿಂಗಳ ಎರಡನೇ ವಾರದ ತನಕ ಇದ್ದು, ಸಾಮಾನ್ಯವಾಗಿ ಎಪ್ರಿಲ್ ೨೦ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಕರೋನಾ ಭೀತಿ ಎದುರಾಗುವುದರಿಂದ ಅವಧಿ ಪೂರ್ವ ಚುನಾವಣೆ ಶೀಘ್ರವೇ ನಡೆಸಬೇಕೆಂದು ಕೇಳಿ ಬರುತ್ತಿದೆ ಎನ್ನಲಾಗಿದೆ.