ನ್ಯೂಸ್ ನಾಟೌಟ್ : ಪೆಟ್ರೋಲ್, ಡೀಸೆಲ್ ನಿಂದ ಓಡಾಡುವ ವಾಹನಗಳ ಕಾಲ ಮುಗಿಯಿತು, ಇನ್ನೇನಿದ್ದರೂ ಇಲೆಕ್ಟ್ರಿಕ್ ವಾಹನಗಳ ಯುಗ ಶುರುವಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಇಲ್ಲೊಬ್ಬ ಅನ್ವೇಷಕ ಬಸ್ ಮಾದರಿಯa ಬೈಕ್ ಕಂಡು ಹಿಡಿದು ಸುದ್ದಿಯಾಗಿದ್ದಾನೆ.
ಇಂದಿನ ದಿನಗಳಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಬೈಕ್ , ಕಾರ್ , ಸ್ಕೂಟರ್ ನಂತಹ ಹಲವು ವಾಹನಗಳು ಹೊಸ ಆವಿಷ್ಕಾರಕ್ಕೆ ಒಗ್ಗಿಕೊಂಡಿವೆ.ಇಂತಹ ಸಮಯದಲ್ಲಿ ಮುಂಬೈನಲ್ಲಿ ವ್ಯಕ್ತಿಯೊಬ್ಬ ಹೊಸ ಅನ್ವೇಷಣೆ ನಡೆಸಿದ್ದಾರೆ. ಈತನ ಬಸ್ ಮಾದರಿಯ ಬೈಕ್ ಕಂಡು ಸ್ವತಃ ಖ್ಯಾತ ಕಾರು ಉತ್ಪಾದಕ ಸಂಸ್ಥೆಯಾದ ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವ್ಯಕ್ತಿ ಯಾರು? ಆತನ ಹೆಸರು ಏನು ಅನ್ನುವುದು ಇದುವರೆಗೆ ಗೊತ್ತಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಇಲೆಕ್ಟ್ರಿಕ್ ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡುತ್ತದೆ. ಅಷ್ಟೇ ಅಲ್ಲ 10 ರೂ. ಗೆ ಸಂಪೂರ್ಣ ಚಾರ್ಜ್ ಆಗುತ್ತದೆ. ಸೈಕಲ್ ರೀತಿಯಲ್ಲಿ ಸೀಟ್ ಗಳನ್ನು ಮಾಡಿದ್ದು, ಜೊತೆಗೆ 6 ಸೀಟ್ ಗಳು ಇದ್ದು, ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಈ ಬೈಕ್ ತಯಾರಿಕೆಗೆ ವೆಚ್ಚ 12,000 ವಾಗಿದೆ ಎಂದು ಬೈಕ್ ತಯಾರಕ ಹೇಳಿದ್ದಾರೆ. ಈ ವ್ಯಕ್ತಿಯ ವಿಡಿಯೋ ಕಂಡು ಆನಂದ್ ಮಹೀಂದ್ರ ,ಗ್ರಾಮೀಣ ಪ್ರದೇಶದಲ್ಲಿನ ಹೊಸ ಆವಿಷ್ಕಾರಗಳು ಯಾವತ್ತಿಗೂ ಪ್ರಭಾವಿತ ಮತ್ತು ಈ ಗ್ರಾಮೀಣ ಪ್ರದೇಶ ಆವಿಷ್ಕಾರ ತಾಯಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.