ನ್ಯೂಸ್ ನಾಟೌಟ್ : ಗುಜರಾತ್ ವಿಧಾನಸಭೆ ಚುನಾವಣೆಯ ಕಣ ರಂಗೇರಿದೆ. ಅಂತಿಮ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ಗುಜರಾತ್ನ ಅರಾವಳಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಮದ್ಯದ ಬಾಟಲಿ ಹಿಡಿದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಹಿರಂಗವಾಗಿ ಮದ್ಯದ ಪೆಟ್ಟಿಗೆಗಳನ್ನು ಕೊಂಡೊಯ್ಯುತ್ತಿದ್ದಾರೆ ಎಂದು ದೀಪಕ್ ಖತ್ರಿ ಎನ್ನುವವರು ಟ್ವಿಟ್ಟರ್ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಟ್ವೀಟ್ನಲ್ಲಿ ‘ಗುಜರಾತ್ನ ಅರಾವಳಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಬಹಿರಂಗವಾಗಿ ಮದ್ಯದ ಬಾಕ್ಸ್ಗಳನ್ನು ಹೊತ್ತೊಯ್ಯುತ್ತಿದ್ದಾರೆ. ಬಿಜೆಪಿಯವರು ಮದ್ಯ ಹಂಚುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಮೌನವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಏನಾದರೂ ವಿವರಣೆ ನೀಡುವುದೇ ಎಂದು ದೀಪಕ್ ಖತ್ರಿ ಬರೆದಿದ್ದಾರೆ.ಈ ಬಗ್ಗೆ ಚುನಾವಣಾ ಆಯೋಗ ‘ನಿಷೇಧಾಜ್ಞೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅರಾವಳಿ ಜಿಲ್ಲೆಯ ಎಸ್ಪಿ ಪ್ರಕಾರ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಮಾಲ್ಪುರ ಪಿಎಸ್ಸಿಆರ್ ನಂ 6220/2022 ರ ಪ್ರಕಾರ ಗುಜ್ ಪ್ರೋಹಿಬಿಷನ್ ಆಕ್ಟ್, 1949 ರ ಅಡಿಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ.