ನ್ಯೂಸ್ ನಾಟೌಟ್: ಈ ಭೂಮಿ ಹಲವಾರು ಪ್ರಾಕೃತಿಕ ವಿಕೋಪಗಳನ್ನು ಕಂಡಿದೆ. ಹಲವಾರು ಯುದ್ಧಗಳು ನಡೆದಿವೆ. ಜತೆಗೆ ಹವಾಮಾನ ಏರುಪೇರಾಗಿದೆ. ಹೀಗಿದ್ದರೂ ಭೂಮಿ ತನ್ನ ಕಾರ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ಮುಂದಿನ ವರ್ಷ ಭೂಮಿಗೆ ಭಾರಿ ಅನಾಹುತ ಕಾದಿದೆ ಎಂದು ಬಾಬಾ ವಂಗಾ ಭವಿಷ್ಯ ಹೇಳಿದ್ದಾರೆ.
ಬಾಬಾ ವಂಗಾ ಬಲ್ಲೇರಿಯಾದ ಅತೀಂದ್ರಿಯ ಶಕ್ತಿ ಹೊಂದಿದ್ದ ಈ ಮಹಿಳೆ ನಡಿದಿಯೋ ಭವಿಷ್ಯ ಜಗತ್ತಿಗೇ ಗೊತ್ತು. ಈ ಮಹಿಳೆ ಹೇಳಿದ ಬಹುತೇಕ ಭವಿಷ್ಯಗಳು ನಿಜ ಆಗಿವೆ. ನಾಸ್ಟಡಾಮನ್ ಆಕ ಅನ್ನು ಅತಿಹೆಚ್ಚು ನಂಬಿರೋದು ಬಾಲಾ ವಂಗಾ ಭವಿಷ್ಯವಾಣಿಯನ್ನು ಹೀಗೆ ಪ್ರಮುಖ ಘಟನಾವಳಿಗಳ ಬಗ್ಗೆ ಹತ್ತಾರು ವರ್ಷಗಳ ಮೊದಲೇ ಭವಿಷ್ಯ ನುಡಿದಿದ್ದ ಬಾಬಾ ವಂಗಾ ಇನ್ನೊಂದೇ ತಿಂಗಳಲ್ಲಿ ಬರುವ 2022ರ ಬಗ್ಗೆ ನುಡಿದಿರೋ ಭವಿಷ್ಯ ಆತಂಕದ ಸರಮಾಲೆಯನ್ನೇ ಹೊತ್ತು ತಂದಿದೆ.
ಭೂಮಿ ಮೇಲೆ ಸೌರ ಸುನಾಮಿ ಅಪ್ಪಳಿಸುವ ಮೂಲಕ ಭೂಮಿಯ ಕಾಂತೀಯ ಗುಣಕ್ಕೆ ಧಕ್ಕೆ ಉಂಟಾಗಲಿದೆ. ಇನ್ನು 2023ರಲ್ಲಿ ಭೂಮಿಯ ಶಕ್ತಿಯೇ ಬದಲಾಗಲಿದ್ದು, ಹವಾಮಾನದಲ್ಲೂ ಭಾರೀ ವೈಪರೀತ್ಯ ಉಂಟಾಗಲಿದೆ. ಏಲಿಯನ್ಗಳ ದಾಳಿಯಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳಬಹುದು. ಲ್ಯಾಟ್ಗಳಲ್ಲಿ ಮಕ್ಕಳನ್ನು ಸೃಷ್ಟಿಸಲಾಗುತ್ತೆ. ಬಣ್ಣಗಳ ಅಧಾರದಲ್ಲಿ ಪೋಷಕರು ಮಕ್ಕಳನ್ನು ಆಯ್ಕೆ ಮಾಡಬಹುದಾಗಿದೆ. ವಿದ್ಯುತ್ ಸ್ಥಾವರದಲ್ಲಾಗುವ ಸ್ಫೋಟದಿಂದ ಇಡೀ ಏಷ್ಯಾದಲ್ಲೇ ದಟ್ಟ ಹೊಗೆ ಆವರಿಸಬಹುದು.
ಇಷ್ಟು ಮಾತ್ರವಲ್ಲದೆ ಭೂಮಿಯಲ್ಲಿ ವಿಕಿರಣಗಳು ಹೆಚ್ಚಾಗಿ ತಾಪಮಾನ ನಿಯಂತ್ರಣಕ್ಕೆ ಸಿಗದಷ್ಟರ ಮಟ್ಟಿಗೆ ಏರಿಕೆಯಾಗಲಿದೆ. ಭೂಮಿಯ ಕಕ್ಷೆ ಪಲ್ಲಟಗೊಂಡು ಹಿಮಯುಗವೇ ಜಗತ್ತನ್ನು ಆವರಿಸಬಹುದು ಅಂತಾ ಬಾಬಾ ವಂಗಾ ಮುಡಿದಿರೋ ಭವಿಷ್ಯದಲ್ಲಿ ಅಡಕವಾಗಿದೆ. 2023ರ ಹೊಸ ವರ್ಷ ಸ್ವಾಗತಕ್ಕೆ ಇನ್ನುಳಿದಿರೋದು ಒಂದೇ ತಿಂಗಳು, ಆದ್ರೆ ಮುಂದಿನ ವರ್ಷದ ಬಗ್ಗೆ ಬಾಬಾ ವಂಗಾ ನುಡಿದಿದ್ದ ಭವಿಷ್ಯ ಮನುಷ್ಯನ ಭವಿಷ್ಯವನ್ನೇ ಸರ್ವನಾಶದ ಕೂಪಕ್ಕೆ ತಳ್ಳುತ್ತಾ ಅನ್ನೋ ಆತಂಕ ಎದುರಾಗಿದೆ.