ನ್ಯೂಸ್ ನಾಟೌಟ್ : ಕೇಂದ್ರ ಸರ್ಕಾರವು ಈ ಹಿಂದೆ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಎಂಬ ಯೋಜನೆ ಜಾರಿ ಮಾಡಿತ್ತು. ರೈತರ ಖಾತೆಗೆ ಇಲ್ಲಿಯವರೆಗೆ 12 ಕಂತುಗಳು ಸಿಕ್ಕಿದ್ದವು. ಆದರೆ 13ನೇ ಕಂತು ಸಿಕ್ಕಿರಲಿಲ್ಲ. ಇದು ಯಾವಾಗ ಸಿಗುತ್ತದೆ ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
೧೩ನೇ ಕಂತು ಯಾವಾಗ?
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತನ್ನು ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 2000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಒಟ್ಟು 6000 ರೂಪಾಯಿ ಹಣವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಮಾಡಲಾಗುತ್ತಿದೆ. ಇದರ ಮಧ್ಯೆ ಹೊಸ ವರ್ಷ 2023ರ ಫೆಬ್ರವರಿ-ಮಾರ್ಚ್ ನಡುವೆ 13ನೇ ಕಂತನ್ನು ಸ್ವೀಕರಿಸಬಹುದು ಎಂದು ಎಬಿಪಿ ಸುದ್ದಿ ವರದಿ ಮಾಡಿದೆ.
13ನೇ ಕಂತು , ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?
ಸರ್ಕಾರದ ಅಧಿಕೃತ https://pmkisan.gov.in/ ವೆಬ್ ಸೈಟ್ ಗೆ ಭೇಟಿ ನೀಡಿ. ಆ ಮುಖಪುಟದಲ್ಲಿ ‘ಫಾರ್ಮರ್ಸ್ ಕಾರ್ನರ್ ವಿಭಾಗವನ್ನು ನೋಡಿ, ‘ಫಲಾನುಭವಿ ಸ್ಥಿತಿ’ ಆಯ್ಕೆಯನ್ನು ಆರಿಸಿ. ಇಲ್ಲಿ, ಫಲಾನುಭವಿಯು ತನ್ನ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಈ ಪಟ್ಟಿಯು ರೈತರ ಹೆಸರು ಮತ್ತು ಅವರ ಬ್ಯಾಂಕ್ ಖಾತೆಗೆ ಕಳುಹಿಸಲಾದ ಮೊತ್ತವನ್ನು ಹೊಂದಿರುತ್ತದೆ. ಈಗ ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಂತರ ‘ಡೇಟಾ ಪಡೆಯಿರಿ’ ಮೇಲೆ ಕ್ಲಿಕ್ ಮಾಡಿ.