ನ್ಯೂಸ್ ನಾಟೌಟ್ : ವೈದ್ಯರ ಸಲಹೆಯಿಲ್ಲದೇ ಎಮರ್ಜೆನ್ಸಿಗೆ ಮೆಡಿಕಲ್ ನಿಂದ ಔಷಧಿ ತಂದು ನಿಮ್ಮ ಮಕ್ಕಳಿಗೆ ಕೊಡುವ ಅಭ್ಯಾಸವಿದೆಯಾ?ಪ್ರಾಣಕ್ಕು ಕಂಟಕವಾಗಬಹುದು,ಪೋಷಕರೇ ಎಚ್ಚರ..ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಔಷಧಿ ಸೇವಿಸಿ ೧೮ ಮಕ್ಕಳು ಮೃತಪಟ್ಟಿದ್ದಾರೆ ಎಂದು ಉಜ್ಜೇಕಿಸ್ತಾನ ಹೇಳಿಕೊಂಡಿದೆ.
ಏನಿದು ಘಟನೆ?
ಕಳೆದ ಕೆಲ ತಿಂಗಳ ಹಿಂದೆ ಗ್ಯಾಂಬಿಯಾ ದೇಶದ ಸುಮಾರು ೭೦ ಮಕ್ಕಳು ಭಾರತದ ಕೆಮ್ಮಿನ ಸಿರಪ್ ಸೇವಿಸಿ ಮೃತಪಟ್ಟ ಆರೋಪ ಕೂಡಾ ಇತ್ತು. ಇದರ ಬೆನ್ನಲ್ಲೇ ಮತ್ತೊಂದು ಘಟನೆ ವರದಿಯಾಗಿದೆ. ಸಾವನ್ನಪ್ಪಿದ್ದ ೧೮ ಮಕ್ಕಳು ನೋಯ್ದಾ ಮೂಲದ ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಡಾಕ್-೧ ಮ್ಯಾಕ್ಸ್ ಔಷಧಿ ಸೇವಿಸಿದ್ದಾರೆ. ಮಕ್ಕಳು ಪ್ರಜ್ಞೆ ತಪ್ಪಿದ್ದು ಕೂಡಲೇ ಅಸ್ಪತ್ರೆಗೆ ದಾಖಲಿಸಿದ್ದರೂ ಮಕ್ಕಳ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ವಿಷಕಾರಿ ಅಂಶ ಪತ್ತೆ?
ಸಿರಪ್ ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು , ಅವುಗಳಲ್ಲಿ ಎಥಿಲೀನ್ ಗ್ಲೈಕೋಲ್ ಎಂಬ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.ವೈದ್ಯರ ಸಲಹೆ ಇಲ್ಲದೆ ಪೋಷಕರು ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಡೋಸ್ ನೀಡಿದ್ದಾರೆ. ವರದಿಗಳ ಪ್ರಕಾರ ಶೀತ ಹಾಗೂ ಜ್ವರ ಇದ್ದ ಮಕ್ಕಳಿಗೆ ಈ ಸಿರಪ್ ನೀಡಲಾಗುತ್ತದೆ. ಇದೀಗ ೧೮ ಮಕ್ಕಳ ಸಾವಿನ ಬಳಿಕ ದೇಶದ ಎಲ್ಲಾ ಔಷಧಾಲಯಗಳಿಂದ ಡಾಕ್-೧ ಮ್ಯಾಕ್ಸ್ ಮಾತ್ರೆಗಳು ಹಾಗೂ ಸಿರಪ್ ಗಳನ್ನು ಹಿಂಪಡೆಯಲಾಗಿದೆ ಎಂದು ವೈದ್ಯಾಧಿಕಾರಿಗಳು ಮತ್ತು ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.