ನ್ಯೂಸ್ ನಾಟೌಟ್: ಕೈ ಹಿಡಿದ ಗಂಡ ಮಕ್ಕಳಿಂದ ದೂರವಾಗಿ ಇದೀಗ ನಟ ನರೇಶ್ ಜತೆ ತಿರುಗಾಡುತ್ತಿರುವ ನಟಿ ಪವಿತ್ರಾ ಲೋಕೇಶ್ ಜೋಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಮಹೇಶ್ ಬಾಬು ಅವರ ತಂದೆ ಸಾವಿಗೀಡಾದ ಸಂದರ್ಭದಲ್ಲಿ ಪಾರ್ಥೀವ ಶರೀರ ವೀಕ್ಷಣೆಗೆಂದು ನರೇಶ್ –ಪವಿತ್ರಾ ಜತೆಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಮಹೇಶ್ ಬಾಬು ಸೇರಿ ಅವರ ಇಡೀ ಕುಟುಂಬ ನೋವಿನಲ್ಲಿತ್ತು. ದೊಡ್ಡ ದೊಡ್ಡ ನಟರು, ರಾಜಕಾರಣಿಗಳು ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಬಂದಿದ್ದರು. ಆದರೆ ಈ ಸಂದರ್ಭದಲ್ಲಿ ನರೇಶ್ –ಪವಿತ್ರಾ ಸ್ವಲ್ಪ ಓವರ್ ಆಗಿಯೇ ಆಡುತ್ತಿದ್ದರು. ಒಬ್ಬರನ್ನೊಬ್ಬರು ಮುಟ್ಟಿಕೊಂಡು ಸಂತೈಸುವುದು, ಪವಿತ್ರಾಗೆ ನರೇಶ್ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುತ್ತಿರುವುದು, ಪವಿತ್ರಾ ಹೆಗಲು ಮುಟ್ಟುವುದು. ಇದು ಅಲ್ಲಿ ನೆರೆದಿದ್ದ ವ್ಯಕ್ತಿಗಳಿಗೂ ಇರಿಸುಮುರಿಸು ತಂದಿದ್ದೂ ನಿಜ.
ಇವರಿಬ್ಬರ ನಡುವಿನ ರಂಗಿನಾಟ ಇದು ಮೊದಲೇನಲ್ಲ. ಈ ಹಿಂದೆ ಇವರಿಬ್ಬರು ಬಹಿರಂಗವಾಗಿ ಕೊಠಡಿಯೊಂದರಲ್ಲಿ ಸಿಕ್ಕಿ ಬಿದ್ದಿದ್ದರು. ಅಣ್ಣ-ತಂಗಿ, ಒಳ್ಳೆ ಫ್ರೆಂಡ್ಸ್ ಅಂತ ಹೇಳಿಕೊಂಡು ತಿರುಗಾಡುತ್ತಿದ್ದ ನರೇಶ್ ಕೊನೆಗೂ ಎಲ್ಲರೆದುರು ತನ್ನ ಮುಖವಾಡವನ್ನು ಕಳಚಿಟ್ಟಿದ್ದರು. ಅಕ್ರಮ ಸಂಬಂಧಕ್ಕೆ ಬೇಸತ್ತಿದ್ದ ನರೇಶ್ ಮೊದಲ ಪತ್ನಿ ರಮ್ಯಾ ಚಪ್ಪಲಿಯಿಂದ ಹಲ್ಲೆ ನಡೆಸಿ ನಿಂದಿಸಿದ್ದರು. ಊರಿಡೀ ಇವರಿಬ್ಬರ ಮಾನ ಮರ್ಯಾದೆ ಹರಾಜಾಗಿದೆ. ಕರ್ನಾಟಕದ ಜನ ಛೀ.. ಥೂ.. ಅಂತ ಉಗಿಯುತ್ತಿದ್ದಾರೆ. ಇಷ್ಟಿದ್ದರೂ ಇವರ ವರ್ತನೆ ಇನ್ನೂ ಬದಲಾಗದಿರುವುದು ವಿಪರ್ಯಾಸವೇ ಸರಿ.