ನ್ಯೂಸ್ ನಾಟೌಟ್ : ಅಲ್ಪಸಂಖ್ಯಾತರ ವಿಭಾಗದ ಮುಖ್ಯಸ್ಥರಾಗಿರುವ ಮಹಿಳಾ ನಾಯಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದ ಅರೋಪದಡಿ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದ ನಾಯಕ ಸೂರ್ಯಶಿವ ಅವರನ್ನು ೬ ತಿಂಗಳ ಕಾಲ ತಮಿಳುನಾಡು ಬಿಜೆಪಿ ಸರಕಾರವು ಅಮಾನುತುಗೊಳಿಸಿದೆ.
ಘಟನೆಯಲ್ಲಿ ಬಿಜೆಪಿ ನಾಯಕ ಸೂರ್ಯಶಿವನು ಡೈಸಿ ಸರನ್ ಜೊತೆ ಮಾತುಕತೆ ಜೋರಾಗಿದ್ದು,ಡೈಸಿ ಅವರನ್ನು ಕಿಡ್ನಾಪ್ ಮಾಡಲು ಗೂಂಡಾಗಳನ್ನು ಕಳುಹಿಸುತ್ತೇನೆ ಮತ್ತು ಕತ್ತರಿಸಿ ಹಾಕುತ್ತೇನೆ ಎನ್ನುವುದರ ಜೊತೆಗೆ ಅಶ್ಲೀಲ ಲೈಂಗಿಕ ಟೀಕೆಗಳನ್ನು ಮಾಡಿದ್ದಾರೆ. ಗುರುವಾರ ಇಬ್ಬರೂ ನಾಯಕರು ಶಿಸ್ತು ಸಮಿತಿಯ ಮುಂದೆ ಹಾಜರಾಗಲಿದ್ದಾರೆ. ಸೂರ್ಯಶಿವನ ಅಸಭ್ಯ ವರ್ತನೆಗೆ ೬ ತಿಂಗಳುಗಳ ಕಾಲ ಪಕ್ಷದ ಎಲ್ಲಾ ಸ್ಥಾನಗಳಿಂದ ಅಮಾನುತಗೊಳಿಸಲಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಬಿಜೆಪಿಯವರು ಮಹಿಳೆಯರನ್ನು ದೇವರಂತೆ ಪೂಜಿಸುತ್ತಾರೆ. ಆದರೆ ಇಲ್ಲಿ ನಮಗೆ ಅವಮಾನವಾಗಿದೆ . ಇನ್ನು ಮುಂದೆ ಸೂರ್ಯಶಿವ ಅವರ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದರೆ ಪುನಃ ಹುದ್ದೆಗೆ ಬರಬಹುದು ಎಂದು ತಿಳಿಸಿದ್ದಾರೆ.