ಪ್ರಿಯ ಓದುಗರೇ…
ಕಾಲ ಬದಲಾದಂತೆ ನಾವು ಬದಲಾಗಬೇಕು. ವೇಗದಿಂದ ಬದಲಾಗುವ ತಾಂತ್ರಿಕ ವ್ಯವಸ್ಥೆಗೆ ನಾವು ಒಗ್ಗಿಕೊಳ್ಳಲೇಬೇಕು. ಇದೀಗ ಅಂತಹುದೇ ಒಂದು ಒಗ್ಗಿಕೊಳ್ಳಬೇಕಾದ ಸರಳ ವ್ಯವಸ್ಥೆಯನ್ನು ವಾಟ್ಸ್ ಅಪ್ ಪರಿಚಯಿಸಿದೆ. ಅದುವೇ ವಾಟ್ಸ್ ಅಪ್ ಕಮ್ಯುನಿಟಿ ಗ್ರೂಪ್ ..
ಈಗ ವಾಟ್ಸ್ಅಪ್ನಲ್ಲಿ ಇರುವುದೇನು?
ಸದ್ಯ ಒಂದು ವಾಟ್ಸಾಪ್ ಗ್ರೂಪ್ ನಲ್ಲಿ ೫೧೩ ಜನರನ್ನು ಹೊಂದುವುದಕ್ಕೆ ಮಿತಿಯಿದೆ. ಈ ಗ್ರೂಪ್ ನಲ್ಲಿ ಭಾಗವಹಿಸುವ ಎಲ್ಲರಿಗೂ ಕೂಡ ಎಲ್ಲರ ಮೊಬೈಲ್ ಸಂಖ್ಯೆ, ಡಿಪಿ ಫೋಟೋ ಇವುಗಳನ್ನೆಲ್ಲ ಸುಲಭವಾಗಿ ನೋಡುವ ಅವಕಾಶವಿದೆ. ಇದರಿಂದ ಗ್ರೂಪ್ ನಲ್ಲಿ ಭಾಗವಹಿಸುವವರ ಮಾಹಿತಿ ಸೊರಿಕೆ ಆಗುತ್ತಿದೆ ಎನ್ನುವ ದೂರುಗಳು ಕೂಡ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲ ದೂರುಗಳನ್ನು ಆಲಿಸಿದ ವಾಟ್ಸ್ ಅಪ್ ಸಂಸ್ಥೆ ಟೆಲಿಗ್ರಾಮ್ ಮಾದರಿಯಲ್ಲಿ ಇದೀಗ ವಾಟ್ಸಾಪ್ ಕಮ್ಯೂನಿಟಿ ಗ್ರೂಪ್ ಅನ್ನು ಹೊಂದುವುದಕ್ಕೆ ಅವಕಾಶ ನೀಡಿದೆ.
ಹೊಸ ಕಮ್ಯುನಿಟಿ ಗ್ರೂಪ್ ನಲ್ಲಿ ಏನಿದೆ?
ಸದ್ಯ ನಾವು ವಾಟ್ಸ್ ಅಪ್ ಕಮ್ಯನಿಟಿ ಗ್ರೂಪ್ನಲ್ಲಿ ನಮ್ಮ ಎಲ್ಲ ಗ್ರೂಪ್ ಗಳನ್ನು ವಿಲೀನ ಮಾಡಿದ್ದೇವೆ. ಒಂದೇ ಗ್ರೂಪ್ ನಲ್ಲಿ ಎಲ್ಲ ಓದುಗರನ್ನು ಒಟ್ಟು ಸೇರಿಸಿದ್ದೇವೆ. ಈ ಗ್ರೂಪ್ ನಲ್ಲಿ ಇರುವ ಇತರರ ಮೊಬೈಲ್ ಸಂಖ್ಯೆಯನ್ನು ಯಾರಿಗೂ ಕಾಣಲು ಸಾಧ್ಯವಾಗುವುದಿಲ್ಲ. ಅಡ್ಮಿನ್ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಮಾತ್ರ ಕಾಣುತ್ತದೆ. ಉಳಿದವರು ಗ್ರೂಪ್ ನಲ್ಲಿ ಇದ್ದರೂ ನಿಮಗೆ ಕಾಣಿಸುವುದಿಲ್ಲ. ಗೌಪ್ಯತೆ ದೃಷ್ಟಿಯಿಂದ ಇಂತಹದ್ದೊಂದು ಕ್ರಮವನ್ನು ವಾಟ್ಸ್ ಅಪ್ ಪರಿಚಯಿಸಿರುವುದು ಉತ್ತಮ ಬೆಳವಣಿಗೆ. ಈ ಹಿಂದೆ ಕೆಲವು ಮೊಬೈಲ್ ಸಂಖ್ಯೆಗಳು ದುರ್ಬಳಕೆ ಆಗಿದ್ದ ದೂರುಗಳು ಬಂದಿದ್ದವು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಓದುಗರೂ ಕೂಡ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು.
ನಮ್ಮೊಂದಿಗೆ ಸಹಕರಿಸಿ
ಬದಲಾವಣೆಯ ಸಮಯದಲ್ಲಿ ನಾವು ಕೂಡ ಬದಲಾಗಿದ್ದೇವೆ. ಈ ಬದಲಾವಣೆಗೆ ನಿಮ್ಮ ಸಹಕಾರವಿರಲಿ.
ಸಂಪಾದಕ , ನ್ಯೂಸ್ ನಾಟೌಟ್