ನ್ಯೂಸ್ ನಾಟೌಟ್ : ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದಲ್ಲಿ ವೃದ್ಧೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮ್ಟಂಗೆ ನಿವಾಸಿ ದಿ. ರಾಮಣ್ಣ ಗೌಡರ ಪತ್ನಿ ಜಾನಕಿ (60) ಮೃತ ವೃದ್ಧೆ. ಮನೆಯಲ್ಲಿ ಇವರು ಹಾಗೂ ಇವರ ಪುತ್ರ ಮಾತ್ರ ಇದ್ದಾರೆ. ಪುತ್ರ ಕೆಲಸಕ್ಕೆ ತೆರಳಿದ್ದರು ತೆರಳಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ವೃದ್ಧೆಗೆ ಒಮ್ಮೊಮ್ಮೆ ಹೇಳದೆ ಪುತ್ರಿಯ ಮನೆಗೆ ಹೋಗುವ ಅಭ್ಯಾಸವಿದೆ. ಹಾಗೇ ಹೋಗಿರಬಹುದೆಂದು ಮಗ ಸುಮ್ಮನಿದ್ದ. ಆದರೆ ಬೆಳಗ್ಗೆ ನೋಡುವಾಗ ಮನೆಯ ತೋಟದ ಕೆರೆಯಲ್ಲಿ ವೃದ್ಧೆಯ ಮೃತದೇಹ ಪತ್ತೆಯಾಗಿರುವುದಾಗಿ ಪುತ್ರ ಲಕ್ಷ್ಮೀಶ ಗೌಡ ಪೊಲೀಸ್ ದೂರನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.