ನ್ಯೂಸ್ ನಾಟೌಟ್ : ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಕರ್ತವ್ಯದಲ್ಲಿದ್ದಾಗಲೇ ಆಯತಪ್ಪಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ತೊಡಿಕಾನ ಸಮೀಪದ ಮಾವಿನ ಕಟ್ಟೆ ನರುವೊಳು ಮೊಟ್ಟೆ ಬಳಿ ನಡೆದಿದೆ.
ಮೃತಪಟ್ಟವರನ್ನು ಪಾರಸ್ಟ್ ವಾಚರ್ ಚಿನ್ನಪ್ಪ (೫೮) ವರ್ಷ ಎಂದು ಗುರುತಿಸಲಾಗಿದೆ. ಕೊಡಗು ಅರಣ್ಯ ಇಲಾಖೆಯಿಂದ ಸರ್ವೆಗೆ ಹೋದ ಸಂದರ್ಭದಲ್ಲಿ ನರುವೊಳು ಮೊಟ್ಟೆ ಎಂಬಲ್ಲಿ ಹೊಳೆ ನೀರು ಕುಡಿಯಲು ಯತ್ನಿಸಿದಾಗ ದುರಂತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಮೃತದೇಹ ಹೊಳೆಯಲ್ಲಿಯೇ ಇದೆ. ಕುಟುಂಬ ಸದಸ್ಯರು ಬಂದ ನಂತರ ಶವವನ್ನು ನೀರಿನಿಂದ ಮೇಲೆತ್ತಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸುತ್ತಿದ್ದಾರೆ.