ನ್ಯೂಸ್ ನಾಟೌಟೌ: ಬೃಹತ್ ಗಾತ್ರದ ಆನೆಯೊಂದು ಸಿಮೆಂಟ್ ಕಂಬಳ ನಡುವಿನ ಬೇಲಿಯಲ್ಲಿ ಸಿಲುಕಿ ವಿಲವಿಲ ಒದ್ದಾಡಿದ ಘಟನೆ ಮಡಿಕೇರಿ ಸಮೀಪದ ತೊಂಡೂರು ಗ್ರಾಮದಲ್ಲಿ ನಡೆದಿದೆ.
ಕಾಡಾನೆಯ ರಕ್ಷಣೆಗೆ ಕೊನೆಗೆ ಸನ್ಫ್ಯೂರ್ ಆಯಿಲ್ ಹಾಗೂ ಸರ್ಫ್ ಬಳಸಿ ಅದನ್ನು ಬೇಲಿಯಿಂದ ಹೊರಕ್ಕೆ ಎಳೆದು ತರಲಾಯಿತು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕುಶಾಲನಗರ-ಸುಂಟಿಕೊಪ್ಪ ಮುಖ್ಯ ರಸ್ತೆಯಲ್ಲಿ ಕಾಣುವ ಆನೆಕಾಡು ರಕ್ಷಿತಾರಣ್ಯ ವ್ಯಾ ಪ್ತಿಯ ತೊಂಡೂರು ಗ್ರಾಮದಲ್ಲಿ , ಕಾಡಾನೆಗಳ ನಿಯಂತ್ರ ಣಕ್ಕೆ ಸಿಮೆಂಟ್ ಕಂಬಗಳ ಬೇಲಿ ಅಳವಡಿಸಲಾಗಿದೆ. ಶುಕ್ರವಾರ ಸಂಜೆ ಈ ವ್ಯಾಪ್ತಿ ಗೆ ದಾಳಿ ಇಟ್ಟ ಕಾಡಾನೆಗಳು ಸಿಮೆಂಟ್ ಬೇಲಿ ದಾಟುವ ಪ್ರಯತ್ನ ನಡೆಸಿವೆ. ಇದರಲ್ಲಿ ಹೆಣ್ಣಾನೆಯೊಂದು ದಾಟುವ ಸಂದರ್ಭದಲ್ಲಿ ಎರಡು ಸಿಮೆಂಟ್ ಕಂಬಗಳ ನಡುವೆ ಸಿಲುಕಿಕೊಂಡಿತು, ಅತ್ತಲೂ ಅಲ್ಲ ಇತ್ತಲೂ ಅಲ್ಲ ಎನ್ನು ವ ಸ್ಥಿ ತಿಗೆ ತಲುಪಿ ಒದ್ದಾಡಿತು. ಇದನ್ನು ಗಮನಿಸುತ್ತಾ ಬೇಲಿಯಾಚೆ ಹೆಣ್ಣಾನೆಯ ಗುಂಪಿನ ಇತರ ಆನೆಗಳು ಗಾಬರಿಯಿಂದ ನಿಂತಿದ್ದರು. ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖಾ ಅಧಿಕಾರಿ ಸಿಬ್ಬಂದಿ ಪರಿಸ್ಥಿ ತಿ ಅವಲೋಕಿಸಿ ಜೆಸಿಬಿ ಮೂಲಕ ಹೆಣ್ಣಾ ನೆಯ ರಕ್ಷಣೆ ಮಾಡುವ ಪ್ರಯತ್ನ ಕ್ಕೆ ಮುಂದಾಗಿದ್ದಾರೆ. ಈ ಸಂದರ್ಭ ಇತರೆ ಆನೆಗಳು ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾದದ್ದು ಕಾರ್ಯಾಚರಣೆಗೆ ತೊಡಕನ್ನುಂಟು ಮಾಡಿತು. ಬೇರೆ ಉಪಾಯ ಕಾಣದ ಅರಣ್ಯ ಇಲಾಖಾ ಸಿಬ್ಬಂದಿ ನಾಲ್ಕು ಟಿನ್ ಸನ್ ಪ್ಯೂ ರ್ ಎಣ್ಣೆ ಮತ್ತು ಸರ್ಫ್ ಬೆರೆಸಿದ ನೀರನ್ನು ಸಿಮೆಂಟ್ ಕಂಬದ ನಡುವೆ ಸಿಲುಕಿದ್ದ ಆನೆಯ ಮೇಲೆ ಸುರಿದದ್ದು ಉಪಯೋಗಕ್ಕೆ ಬಂದಿತು. ಜಾರಿಕೆಯ ಎಣ್ಣೆ ಮತ್ತು ಸರ್ಫ್ನಿಂದ ಹೆಣ್ಣಾ ನೆ ಕಂಬಗಳೆಡೆಯಿಂದ ಹೊರ ಬರುವ ಮೂಲಕ ಸಂಕಷ್ಟ ಬಗೆಹರೆಯಿತು. ಅಷ್ಟು ಹೊತ್ತು ಕಂಬಗಳ ನಡುವೆ ಸಿಲುಕಿ ಆಕ್ರೋ ಶ ಗೊಂಡಿದ್ದ ಹೆಣ್ಣಾ ನೆ ಅರಣ್ಯ ಸಿಬ್ಬಂ ದಿಗಳ ಮೇಲೆ ದಾಳಿಗೆ ಮುಂದಾಗಿ ಆತಂಕ ಮೂಡಿಸಿತು. ನಂತರ ಇತರೆ ಆನೆಗಳೊಂದಿಗೆ ಕಾಡು ಸೇರಿತು.