ನ್ಯೂಸ್ ನಾಟೌಟ್ : ಅಮರ ತರಂಗ ನಾಟಕ ಸಂಘದ ಪದಗ್ರಹಣ, ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ ಸಂಜೆ 5.30 ರಿಂದ ನ.20 ರಂದು ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಣ ನಿರ್ದೆಶಕ ತುಕಾರಾಮ ಯೇನೆಕಲ್ಲು ಉದ್ಘಾಟಿಸಲಿದ್ದಾರೆ. ತೇಜಕುಮಾರ್ ಕುಡೆಕಲ್ಲು ಅಧ್ಯಕ್ಷತೆ ವಹಿಸಲಿದ್ದಾರೆ. ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಲಾಂಛನ ಅನಾವರಣ ಮಾಡಲಿದ್ದಾರೆ. ಎ.ಕೆ .ಹಿಮಕರ್ ಅವರು ಬರೆದ ನಾಟಕ ಅಮರ ಸಮರ ನಾಯಕ- ಕದಂಬಾಡಿ ರಾಮಯ್ಯ ಗೌಡ ಕೃತಿಯನ್ನು ಆಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಲೋಕಾರ್ಪಣೆ ಮಾಡಲಿದ್ದಾರೆ. ವಿದ್ಯಾಧರ ಕುಡೆಕಲ್ಲು ಬರೆದ ಇತಿಹಾಸ ಕೃತಿ, ಅಮರ ಸುಳ್ಯ: – 1837 ಇದರ ದ್ವಿತೀಯ ಆವೃತ್ತಿ ಲೋಕಾರ್ಪಣೆಯನ್ನು ನಂದಕುಮಾರ್ ಎಚ್.ಎಂ.ಮಡಿಕೇರಿ ಇವರು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಒಕ್ಕಲಿಗರ ವಾಯ್ಸ್, ಬೆಂಗಳೂರು ಇದರ ಸಂಪಾದಕ ಎಸ್.ನಾಗಭೂಷಣ್, ರಾಧಾಕೃಷ್ಣ ಬೊಳ್ಳೂರು ಇರಲಿದ್ದಾರೆ. ಸಭಾ ಕಾರ್ಯಕ್ರಮ ಬಳಿಕ ಅಮರ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನ ನಡೆಯಲಿದೆ.