ನ್ಯೂಸ್ ನಾಟೌಟ್ : ನಿಮ್ಮ ಮಗಳ ಹೆಸರಲ್ಲಿ ರೂ.500 ಹೂಡಿಕೆ ಮಾಡಿದ್ರೆ ಭವಿಷ್ಯದಲ್ಲಿ ಆಕೆಗೊಂದು ಆರ್ಥಿಕ ಭದ್ರತೆ ನೀಡಬಹುದಾಗಿದೆ. ಸರಕಾರದ ಈ ಯೋಜನೆಯಿಂದ ನಿಮ್ಮ ಮಗಳಿಗೆ ಉನ್ನತ ಶಿಕ್ಷಣ ಅಥವಾ ಮದುವೆಗೆ ಉತ್ತಮ ಮೊತ್ತವನ್ನು ಸಿದ್ದಾಪಡಿಸಬಹುದು. ನಿಮ್ಮ ಹಣವು ಸರಕಾರದ ಭದ್ರತೆಯೊಂದಿಗೆ ಸುರಕ್ಷಿತವಾಗಿರುತ್ತದೆ.
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಯೊಚನೆ ಮಾಡುತ್ತಾರೆ. ಅದರಲ್ಲು ಹೆಣ್ಣುಮಕ್ಕಳ ಭವಿಷ್ಯದ ಬಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೆಣ್ಣುಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿಸಲು, ಪೋಷಕರನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸುಕನ್ಯಾ ಸಮೃದ್ಧಿ ಯೋಜನೆಗೆ ಚಾಲನೆ ನೀಡಿದರು. ಸುಕನ್ಯಾ ಸಮೃದ್ಧಿ ಯೊಜನೆಯಲ್ಲಿ ಒಬ್ಬರು ಕೇವಲ ರೂ.500 ರೂಗಳಲ್ಲಿ ಹೂಡಿಕೆಯನ್ನು ಮಾಡಬಹುದು. ಸರಕಾರವು ವಾರ್ಷಿಕ 7.6 ರಷ್ಟು ಬಡ್ಡಿಯ ಲಾಭವನ್ನು ನೀಡುತ್ತದೆ. ಯೋಜನೆಯಲ್ಲಿ, ನೀವು ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ. ಆದಾಗ್ಯೂ, ನೀವು ಒಂದು ವರ್ಷದಲ್ಲಿ ಕನಿಷ್ಠ 250 ರೂ ಹೂಡಿಕೆ ಮಾಡದಿದ್ದರೆ ನೀವು ರೂ.50 ದಂಡವನ್ನು ಸಹ ಎದುರಿಸಬೇಕಾಗುತ್ತದೆ. ನಿಮ್ಮ ಮಗಳಿಗೆ 5 ವರ್ಷ ಇರುವಾಗ ಈ ಯೋಜನೆಯನ್ನು ಮಾಡಬಹುದು. ನೀವು ಯೋಜನೆಯಲ್ಲಿ 15 ವರ್ಷಗಳವರೆಗೆ ಮಾತ್ರ ಹಣವನ್ನು ಠೇವಣಿ ಮಾಡಬೇಕು. ಆದರೆ ಮಗಳು 21 ವರ್ಷ ಪೂರ್ಣಗೊಳ್ಳುವವರೆಗೂ ಬಡ್ಡಿಯ ಲಾಭವು ಲಭ್ಯವಿರುತ್ತದೆ. ನೀವು ದೇಶದ ಯಾವುದೇ ಅಂಚೆ ಕಚೇರಿ ಅಥವಾ ಬ್ಯಾಂಕ್ನಲ್ಲಿ ಖಾತೆಯನ್ನು ತೆರೆಯಬಹುದು.