ನ್ಯೂಸ್ ನಾಟೌಟ್: ಹಿಂದು ಎಂಬುದು ಅಶ್ಲೀಲ ಪದ ಎಂಬ ವಿವಾದಾತ್ಮಕ ಹೇಳಿಕೆ ತೀವ್ರ ವಿರೋಧಕ್ಕೆ ಗುರಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಸತೀಶ್ ಜಾರಕಿಹೊಳಿಯವರು ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದು ಶಬ್ಧದ ಮೇಲೆ ಮಾತನಾಡಿದ್ದೇನೆ. ಈ ಬಗ್ಗೆ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ನಾನು ಭಾಷಣದಲ್ಲಿ ಹೇಳಿದ್ದು ಹಿಂದು ಶಬ್ಧ ಪರ್ಷಿಯನ್ ನಿಂದ ಬಂದಿದೆ ಎಂದು ಹೇಳಿದ್ದು ನಿಜ. ಈ ಬಗ್ಗೆ ಚರ್ಚೆ ಆಗಬೇಕು ಎಂದು ನಾನು ಹೇಳಿದ್ದೇನೆ. ಹಿಂದೂ ಶಬ್ಧದ ಬಗ್ಗೆ ನಿಂದನೆ ಕೆಲವು ಪದಗಳು ದಾಖಲೆಯಲ್ಲಿ ಸಿಗುತ್ತೆ ಈ ಬಗ್ಗೆ ಕೋಟ್ ಮಾಡಿ ಹೇಳಿದ್ದೇನೆ. ಇದು ಸತೀಶ್ ಜಾರಕಿಹೊಳಿ ವೈಯಕ್ತಿಕ ಹೇಳಿಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದಲ್ಲಿ ಚರ್ಚೆ ಹಿನ್ನೆಲೆ ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯ. ಜಾತಿ, ಧರ್ಮ ಮೀರಿ ಕೆಲಸ ಮಾಡುವ ಉದ್ದೇಶ ನನ್ನದು. ಪರ್ಷಿಯನ್ನಿಂದ ಹಿಂದೂ ಪದ ಬಂದಿದ್ದ ಬಗ್ಗೆ ನೂರಾರು ದಾಖಲೆ ಇವೆ. ಅನೇಕ ಪುಸ್ತಕಗಳಲ್ಲಿ ಈ ಬಗ್ಗೆ ಉಲ್ಲೇಖಗಳು ಇವೆ. ಮಾಧ್ಯಮಗಳು ಉಕ್ರೇನ್, ರಷ್ಯಾ ಯುದ್ಧ ಮಾದರಿಯಲ್ಲಿ ವಿಶ್ಲೇಷಣೆ ಮಾಡುತ್ತಿವೆ. ಈ ಸಮಯ ಬೇರೆ ವಿಷಯಕ್ಕೆ ಕೊಟ್ಟಿದರೇ ಒಳ್ಳೆಯದಾಗುತ್ತಿದೆ ಎಂದು ಹೇಳಿದ್ದಾರೆ.