ನ್ಯೂಸ್ ನಾಟೌಟ್: ಕಳೆದೆರಡು ದಿನಗಳಿಂದ ಪ್ರತ್ಯೇಕ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಪರಿಸರದಿಂದ ಇಬ್ಬರು ಮಹಿಳೆಯರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಕಳೆದೆರಡು ದಿನಗಳಿಂದ ಮನೆಯವರು ಎಲ್ಲಾ ಕಡೆ ಹುಡುಕಿದರೂ ಇವರ ಸುಳಿವು ದೊರೆತಿಲ್ಲ ಎಂದು ತಿಳಿದು ಬಂದಿದೆ. ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪಾಜೆಯ ನಾಗವೇಣಿ (೨೮) ಎಂಬ ಮಹಿಳೆ ನ. ೨೧ ಕಾಣೆಯಾಗಿದ್ದಾರೆ. ಇವರು ಸಂಪಾಜೆಯ ಕೀಲಾರು ಮೂಲೆಯಲ್ಲಿ ವಾಸವಾಗಿದ್ದರು. ಅರಂತೋಡು ಪೋಸ್ಟ್ ಆಫೀಸ್ ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮನೆಗೆ ಹಿಂತಿರುಗಿಲ್ಲ. ಮನೆಯವರು ಪೋನ್ ಕರೆಗಳು ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತದೆ.
ಇಕೆಯು ಬಿಳಿ ಮೈಬಣ್ಣ ಹಾಗೂ ಸಪೂರ ಶರೀರದವಳು, ಈಕೆ ಕಾಣೆಯಾದ ಸಂದರ್ಭದಲ್ಲಿ ಚೂಡಿದಾರ ಬಟ್ಟೆಯನ್ನು ಧರಿಸಿದ್ದಾಳು. ಇವರು ಕನ್ನಡ, ತುಳು, ಮಲಯಾಳಂ ಭಾಷೆಗಳನ್ನು ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ. ಅದೇ ರೀತಿ ಮತ್ತೊಂದು ಪ್ರಕರಣ ಸಂಪಾಜೆ ಗ್ರಾಮ ನೆಲ್ಲಿಕುಮೇರಿಯಿಂದ ವರದಿಯಾಗಿದೆ. ವಿವಾಹಿತೆ ಮಹಿಳೆ ಮಹಾಲಕ್ಷೀ (೩೮) ಎಂಬವರು ಸೆ.೪ ರಂದು ಮನೆಯಿಂದ ರಬ್ಬರ್ ಟ್ಯಾಪಿಂಗ್ ಗೆ ಹೋದವರು ಮರಳಿ ಬರಲೇ ಇಲ್ಲ. ಇವರನ್ನು ತಮಿಳುನಾಡು ಮತ್ತು ಇತರ ಸಂಬಂಧಿಕರ ಕಡೆಯಲ್ಲಿ ವಿಚಾರಿಸಲಾಗಿದೆ. ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ಇವರು ಬಿಳಿ ಮೈ ಬಣ್ಣ ಹಾಗೂ ಕನ್ನಡ , ತುಳು, ಮಲಯಾಳಂ, ತಮಿಳ್ ಮಾತನಾಡುತ್ತಾರೆ. ಇವರನ್ನು ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.