ನ್ಯೂಸ್ ನಾಟೌಟ್: ಸುಳ್ಯ ತಾಲೂಕು ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ವೇದಿಕೆ ಸಿದ್ಧವಾಗುತ್ತಿದೆ. ಈ ಪ್ರಯುಕ್ತ ಅರಂತೋಡು ನೆಹರೂ ಸ್ಮಾರಕ ಪ.ಪೂ ಕಾಲೇಜಿನಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಉದ್ಘಾಟನೆಗೊಂಡಿದೆ.
ಇದೇ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಕಾಲೇಜಿನ ಸಂಚಾಲಕ ಕೆ ಆರ್ ಗಂಗಾಧರ ಮಾತನಾಡಿ, ಇಂತಹ ಸ್ಪರ್ಧಾತ್ಮಕ ಚಟುವಟಿಕೆಗಳ ಮಕ್ಕಳು ಗೆದ್ದರೂ, ಸೋತರು ಅದನ್ನು ಸವಾಲಾಗಿ ಸ್ವೀಕರಿಸಿ ಬದುಕಿನ ಪಾಠವನ್ನು ಕಲಿಯಬೇಕಿದೆ ಎಂದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೆಳನದ ಸ್ವಾಗತ ಸಮೀತಿ ಅಧ್ಯಕ್ಷ ಉಮ್ಮರ್ ಬೀಜದ ಕಟ್ಟೆ , ಕಾಲೇಜಿನ ಪ್ರಿನ್ಸಿಪಾಲ್ ರಮೇಶ್ , ಪ್ರೌಢಶಾಲೆ ಮುಖ್ಯಶಿಕ್ಷಕ ಸೀತಾರಾಮ ಎಂ. ಕೆ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಾಳ , ಸಂಪಾಜೆ ಗ್ರಾ.ಪಾಂ. ಅಧ್ಯಕ್ಷ ಜಿ.ಕೆ ಹಮೀದ್, ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕಿ ಚಂದ್ರಮತಿ ಉಪಸ್ಥಿತರಿದ್ದರು. ಸ್ಪರ್ಧಾ ಸಮಿತಿ ಸಮಚಾಲಕ ಹನುಮಂತಪ್ಪ. ಜಿ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಕೇಶವ ಸಿ.ಎ. ಪ್ರಾಸ್ತಾವಿಕ ಮಾತನಾಡಿದರು. ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು.