ನ್ಯೂಸ್ ನಾಟೌಟ್ : ದುಷ್ಕರ್ಮಿಗಳ ಸಂಚಿಗೆ ಬಲಿಯಾದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹಂತಕರಿಗೆ ಈಗ ಲುಕ್ಔಟ್ ನೋಟಿಸ್ ಜಾರಿಯಾಗಿದೆ. ಬಾಕಿ ಉಳಿದಿರಿರುವ ದುಷ್ಕರ್ಮಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಎನ್ಐಎ ಭರ್ಜರಿ ನಗದು ಮೊತ್ತವನ್ನೂ ಘೋಷಿಸಿದೆ. ಈ ಹಿನ್ನೆಲೆಯಲ್ಲಿ NIA (ರಾಷ್ಟ್ರೀಯ ತನಿಖಾ ದಳ) ಇದೀಗ ಪುತ್ತೂರಿನ ಬಸ್ ಸ್ಟ್ಯಾಂಡ್ ಸೇರಿದಂತೆ ವಿವಿಧ ಕಡೆ ಆರೋಪಿಗಳ ನೋಟಿಸ್ ಅನ್ನು ಅಂಟಿಸುವ ಕೆಲಸವನ್ನು ನಡೆಸಿದೆ.
ಬೆಳ್ಳಾರೆ ಬೂಡು ನಿವಾಸಿ ಮೊಹಮ್ಮದ್ ಮುಸ್ತಾಫಾ, ಮಡಿಕೇರಿಯ ತುಫೈಲ್ , ಬೆಳ್ಳಾರೆಯ ಅಬೊಬಕ್ಕರ್ ಸಿದ್ದಿಕ್ ಸದ್ಯ ತಲೆ ಮರೆಸಿಕೊಂಡಿದ್ದಾರೆ. ಇವರನ್ನು ಹಿಡಿಯುವಲ್ಲಿ ಸಹಕರಿಸುವಂತೆ ಕೋರಿ ಎನ್ಐಎ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.