ನ್ಯೂಸ್ ನಾಟೌಟ್ : ವಾಹನ ಸಾಲ ಮಂಜೂರಾತಿಗೆ ಲಂಚ ಪಡೆಯುತ್ತಿದ್ದ ವೇಳೆ ಸಿಬ್ಬಂದಿ ಲೋಕಾಯಕ್ತ ಬಲೆಗೆ ಬಿದ್ದ ಘಟನೆಯು ಮಡಿಕೇರಿಯಲ್ಲಿ ವರದಿಯಾಗಿದೆ.
ಘಟನೆಯಲ್ಲಿ ಮಡಿಕೇರಿ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಎಫ್ ಡಿಎ ಲೋಕಾಯುಕ್ತ ಲತಾ ಬಲೆಗೆ ಬಿದ್ದ ಸಿಬ್ಬಂದಿ . ಇವರು ಸೋಮವಾರಪೇಟೆ ವ್ಯಕ್ತಿಯಬ್ಬರಿಂದ ಇಲಾಖೆಯಲ್ಲಿ ಸಬ್ಸಿಡಿಗೆ ಕಾರು ಮಂಜೂರಾತಿಗೆ ಶೇ.೧೦ ರಷ್ಟು ಲಂಚದ ಬೇಡಿಕೆ ಇಟ್ಟಿದ್ದರು . ೨೦ ಸಾವಿರ ರು. ನೀಡುವಂತೆ ಕೇಳಿದ್ದಾರೆ. ಬುಧವಾರ ತಮ್ಮ ಕಚೇರಿಯಲ್ಲಿ ೧೦ ಸಾವಿರ ರು. ಪಡೆದುಕೊಳ್ಳುವ ಸಂದರ್ಭದಲ್ಲಿ ಮಡಿಕೇರಿ ಲೋಕಾಯಕ್ತ ಇನ್ಸಪೆಕ್ಟರ್ ಲೋಕೇಶ್, ಮೈಸೂರು ಲೋಕಾಯಕ್ತ ಇನ್ಸಪೆಕ್ಟರ್ ಜಯರತ್ನ ಅವರ ನೇತೃತದಲ್ಲಿ ದಿಢೀರ್ ದಾಳಿ ನಡೆಸಿ ಲೋಕಾಯುಕ್ತ ಅಧಿಕಾರಿಗಳು ಲತಾ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.