ನ್ಯೂಸ್ ನಾಟೌಟ್ : ಮೈ ಮುರಿದು ದುಡಿದು ತಿನ್ನುವುದಕ್ಕೆ ಆಗದೆ ಸುಲಭದಲ್ಲಿ ಹಣಗಳಿಸುವುದಕ್ಕೆ ಮುಂದಾಗುವ ವ್ಯಕ್ತಿ ಸಮಾಜದಲ್ಲಿ ಕಳ್ಳ ಎಂದು ಗುರುತಿಸಿಕೊಂಡು ತಿರುಗಾಡುತ್ತಿರುತ್ತಾನೆ. ಇಲ್ಲೊಬ್ಬ ಕಳ್ಳ ಮಡಿಕೇರಿಯ ಜಿಲ್ಲಾಸ್ಪತ್ರೆಯ ವೈದ್ಯರ ಸ್ಕೂಟಿಯೊಂದಿಗೆ ಬ್ಯಾಗ್ ಕೂಡ ಕದ್ದುಕೊಂಡು ಪರಾರಿಯಾಗಿದ್ದಾನೆ. ಮಂಗಳವಾರ ಈ ಪ್ರಕರಣ ನಡೆದಿದೆ.
ಜಿಲ್ಲಾ ಆಸ್ಪತ್ರೆಯ ಪರಿಸರದಲ್ಲಿ ಮಾಸ್ಕ್ ಧರಿಸಿದ ಯವಕನೊಬ್ಬನು ಸಂಜೆ ೭ ಗಂಟೆಗೆ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿ ರೀತಿಯಲ್ಲಿ ಬಂದು ಅಂದಾಜು ೧ ಗಂಟೆಗಳ ಕಾಲ ವೈದ್ಯರ ಕೊಠಡಿಗಳ ಸುತ್ತಮುತ್ತ ಓಡಾಡಿದ್ದಾನೆ. ನಂತರ ಯಾರು ಇಲ್ಲದ ಸಮಯ ನೋಡಿ ವೈದ್ಯರುಗಳ ೭ ಬ್ಯಾಗುಗಳನ್ನು ಕದ್ದಿದ್ದಾನೆ. ಬ್ಯಾಗಿನಲ್ಲಿ ಸಿಕ್ಕಿದ ಒಂದು ಕೀ ಬಳಸಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಆಕ್ಟೀವ ಹೋಂಡ ಕದ್ದು ಪರಾರಿಯಾಗಿದ್ದಾನೆ. ಈ ದೃಶ್ಯಗಳು ಆಸ್ಪತ್ರೆಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ಹಾಗೂ ಸಿಬ್ಬಂದಿ ಸಹಿತ ಶ್ವಾನದಳ, ಬೆರಳಚ್ಚು ತಜ್ಙರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.