ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಬಾಂಬ್ ಸ್ಫೋಟಗೊಂಡ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಶಾರಿಖ್ ತಂದಿರುವುದು ಅಂತಿಂಥ ಬಾಂಬ್ ಅಲ್ಲ, ಈ ಬಾಂಬ್ ಸರಿಯಾಗಿ ಸ್ಫೋಟಗೊಂಡಿದ್ದರೆ ಒಂದು ಇಡೀ ಬಸ್ ಅನ್ನು ಛಿದ್ರಗೊಳಿಸುವ ಪವರ್ ಇರುತ್ತಿತ್ತು ಅನ್ನುವ ಸ್ಫೋಟಕ ವಿಚಾರವು ಇದೀಗ ಹೊರ ಬಿದ್ದಿದೆ.
ಕುಕ್ಕರ್ ನಲ್ಲಿದ್ದದ್ದು ಪ್ರಬಲ ಬಾಂಬ್ ಅನ್ನುವುದು ಇದೀಗ ಬೆಳಕಿಗೆ ಬಂದಿದೆ. ಎಷ್ಟರ ಮಟ್ಟಿಗೆ ಎಂದರೆ 3 ಲೀಟರ್ ಕುಕ್ಕರ್ ತುಂಬಾ ಇತ್ತು ಸ್ಪೋಟಕದ ಜೆಲ್. ಅದರ ಜೊತೆ ಒಂದು ಡಿಟೋನೇಟರ್ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಡಿಟೋನೇಟರ್ಗೆ ಪವರ್ ಹೋಗದೆ ಕೇವಲ ಜೆಲ್ ಗೆ ಬೆಂಕಿ ಹಚ್ಚಿಕೊಂಡಿದೆ. ಜೆಲ್ ಗೆ ಬೆಂಕಿ ಹೊತ್ತಿಕೊಂಡು ಜೆಲ್ ಉರಿದು ದಟ್ಟ ಹೊಗೆ ಆವರಿಸಿಕೊಂಡಿದೆ.
ಒಂದು ವೇಳೆ ಡಿಟೊನೇಟರ್ ಮತ್ತು ಜೆಲ್ ಎರಡು ಒಂದೇ ಸಲ ಉರಿದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಒಂದು ವೇಳೆ ಸರಿಯಾದ ಸ್ಫೋಟವಾಗಿದ್ದರೆ ಆಟೋ ಪುಡಿ ಪುಡಿಯಾಗುತ್ತಿತ್ತು. ಸುತ್ತಮುತ್ತಲಿನ ವಾಹನಗಳು ಜಖಂ ಆಗಿ ಬಹಳಷ್ಟು ಸಾವು ನೋವು ಸಂಭವಿಸುತ್ತಿತ್ತು ಎನ್ನುವುದು ಎಫ್ ಎಸ್ ಎಲ್ ಪ್ರಾಥಮಿಕ ವರದಿಯಲ್ಲಿ ಬಹಿರಂಗಗೊಂಡಿದೆ.