- +91 73497 60202
- [email protected]
- November 27, 2024 4:05 AM
ಕೊಡಗು, ದಕ್ಷಿಣ ಕನ್ನಡದ ಹಲವೆಡೆ ಗ್ಲಾಸ್ ತೊಳೆಯುತ್ತಿದ್ದಾರೆ ಬಾಂಗ್ಲಾ ವಲಸಿಗರು..?
ನ್ಯೂಸ್ ನಾಟೌಟ್: ಕುಕ್ಕರ್ ಹಿಡಿದು ಬಂದ ಉಗ್ರನ ಜಾತಕ ಸಾರ್ವಜನಿಕವಾಗಿಯೇ ಬಟಾಬಯಲಾಗಿದೆ. ಅದೃಷ್ಟವಶಾತ್ ಕರಾವಳಿಯಲ್ಲಿ ಸಂಭವಿಸುಬಹುದಾಗಿದ್ದ ಭಾರಿ ಅನಾಹುತವೊಂದು ಕೈ ತಪ್ಪಿದೆ. ಈ ಉಗ್ರ ಏನೋ ಸಿಕ್ಕಿಬಿದ್ದ. ಸಂಭವನೀಯ ದುರಂತವೂ ತಪ್ಪಿತು. ಆದರೆ ಅಷ್ಟಕ್ಕೆ ಗೆದ್ದೆವು ಅಂತ ಬೀಗುವಂತಿಲ್ಲ..! ಕೊಡಗಿನ ಕಾಫೀ ತೋಟಗಳಲ್ಲಿ ಹಾಗೂ ದಕ್ಷಿಣ ಕನ್ನಡದ ಕೆಲವು ಎಸ್ಟೇಟ್‌ಗಳಲ್ಲಿ ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆಂದು ಬಂದವರು ಅನೇಕರು. ಇವರು ಯಾರು? ಕುಲ ಗೋತ್ರ ಗೊತ್ತಿಲ್ಲ. ಯಾರು ಕೇಳಿಯೂ ಇಲ್ಲ. ಕೇಳಲೂ ಹೋದಾಗ ಕೈಗೂ ಸಿಗುವುದಿಲ್ಲ. ತಲೆಮರೆಸಿಕೊಂಡು ತಿರುಗುತ್ತಿರುವ ಇಂತಹವರ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕಿದೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ಎಸ್ಟೇಟ್‌ಗಳಲ್ಲಿ ಆರಾಮವಾಗಿರುವ ಇವರ ಹಿನ್ನೆಲೆ ಏನು? ಅನ್ನುವುದನ್ನು ತುರ್ತಾಗಿ ತಿಳಿಯಬೇಕಿದೆ. ಮೂಲಗಳ ಮಾಹಿತಿ ಪ್ರಕಾರ ಕೆಲವರು ಅಕ್ರಮ ಮರಳು ದಂಧೆಯ ತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲವರು ಹೋಟೆಲ್‌ನಲ್ಲಿ ಸಪ್ಲೈ, ಗ್ಲಾಸು ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನವರು ಬಾಂಗ್ಲಾ ರೋಹಿಂಗ್ಯಾಗಳು ಎಂಬ ಮಾತುಗಳು ಕೇಳಿ ಬರುತ್ತಿವೆ. ಕೊಡಗಿನ ಗಡಿ ಭಾಗದ ಸಮೀಪದ ಚೆಂಬು ಗ್ರಾಮದಲ್ಲಿಯೂ ಎಸ್ಟೇಟ್‌ವೊಂದರಲ್ಲಿ ಹೊರ ರಾಜ್ಯದ ಜನರು ಬಂದು ಕೆಲಸಕ್ಕಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗುತ್ತಿದೆ. ಇಂತಹ ವಿಚಾರ ಕೇವಲ ಒಂದು ಕಡೆಯಲ್ಲ, ಕೊಡಗಿನ ಹಲವು ಎಸ್ಟೇಟ್‌ಗಳಲ್ಲಿ ಹುಡುಕಿದರೆ ಸಿಗುತ್ತದೆ. ಹೀಗೆ ಅಲ್ಲಲ್ಲಿ ಅಡಗಿರುವವರನ್ನು ಪೊಲೀಸರು ಡ್ರಿಲ್ ಮಾಡಿಸಬೇಕಿದೆ. ಹೀಗೆ ವಿವಿಧ ಕಡೆ ಕೆಲಸ ಮಾಡುವವರು ಹೇಳುವುದು ತಾವು ಅಸ್ಸಾಂನಿಂದ ಬಂದವರೆಂದು. ಆದರೆ ಬಾಂಗ್ಲಾದಿಂದ ಕದ್ದು ದೇಶದ ಒಳಗೆ ನುಗ್ಗಿರುವ ವ್ಯಕ್ತಿಗಳು ಕೂಡ ಹಗಲು ವೇಷ ಹಾಕಿಕೊಂಡು ನಮ್ಮ ಮುಂದೆಯೇ ತಿರುಗಾಡುತ್ತಿದ್ದಾರೆ. ಇವರ ಚಟುವಟಿಕೆ ಅತ್ಯಂತ ನಿಗೂಢವಾಗಿದೆ. ಹೀಗಾಗಿ ಇವರಿರುವ ಸ್ಥಳಗಳನ್ನು ಪೊಲೀಸರು ತಪಾಸಣೆ ನಡೆಸಬೇಕಿದೆ. ಅನುಮಾನ ಬಂದವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಬೇಕಿದೆ. ಮುಖ್ಯವಾಗಿ ಇಂತಹ ಜನರಿಗೆ ಕೆಲಸ ಕೊಡುವ ಮಾಲೀಕರನ್ನು ಮೊದಲಾಗಿ ವಿಚಾರಣೆ ನಡೆಸಬೇಕು. ಕೆಲಸಕ್ಕೆ ಸೇರಿಸಿಕೊಂಡವರ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಪರಿಶೀಲನೆ ನಡೆಸಬೇಕು. ಹೀಗೆ ಮಾಡಿದರೆ ಹಲವು ಮಂದಿ ಪೊಲೀಸರ ಅತಿಥಿಗಳಾಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಿವೆ ಬಲ್ಲ ಮೂಲಗಳು. ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ ಸಂಬಂಧಪಟ್ಟವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಈ ಮೂಲಕ ಸುತ್ತಮುತ್ತ ಸಂಭವಿಸುವ ಅಪಾಯವನ್ನು ತಪ್ಪಿಸಬಹುದು.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ