ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಕೆಂಗಣ್ಣು ರೋಗ ಕಾಣಿಸಿಕೊಂಡಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಚಿಕ್ಕ ಮಕ್ಕಳಲ್ಲಿ ಇದು ಅಧಿಕ ಪ್ರಮಾಣದಲ್ಲಿ ಹರಡುತ್ತಿದೆ. ಹೀಗಾಗಿ ಶಾಲಾ, ಕಾಲೇಜುಗಳಲ್ಲಿ ಎಚ್ಚರಿಕೆ ವಹಿಸಬೇಕಿದೆ. ಈ ಸೋಂಕು ಕಾಣಿಸಿಕೊಂಡಿರುವುದು ಇದು ಹೊಸತೇನಲ್ಲ. ಈ ಹಿಂದೆ ಕೂಡ ಕಾಣಿಸಿಕೊಂಡಿದ್ದಿದೆ. ಹಾಗಂತ ಇದನ್ನು ತೀರ ನಿರ್ಲಕ್ಷ್ಯಿಸುವ ಹಾಗೆಯೂ ಇಲ್ಲ. ಇದು ಒಬ್ಬರಿಂದ ಒಬ್ಬರಿಗೆ ಅತ್ಯಂತ ವೇಗವಾಗಿ ಹರಡುತ್ತದೆ. ದೊಡ್ಡವರಿಗಿಂತಲೂ ಶಾಲೆಯಲ್ಲಿ ಮಕ್ಕಳಲ್ಲಿ ವೇಗವಾಗಿ ಹಬ್ಬುತ್ತದೆ.
ಕಣ್ಣು ಕೆಂಪಗಾಗುತ್ತದೆ. ಹೆಚ್ಚು ಉರಿಯುತ್ತದೆ. ಕಣ್ಣಿನಲ್ಲಿ ತುರಿಕೆ. ಅತಿಯಾದ ನೋವು ಕಿರಿಕಿರಿ ಇರುತ್ತದೆ. ನಿಮಗೆ ಇಂತಹ ಲಕ್ಷಣಗಳಿದ್ದರೆ ತಕ್ಷಣ ವೈದ್ಯರ ಸಂಪರ್ಕಿಸಿ. ಅಗತ್ಯ ಔಷಧ ಪಡೆದುಕೊಳ್ಳಿ.
ಕೆಂಗಣ್ಣು ರೋಗದ ಭಗ್ಗೆ ಭಯ ಪಡುವ ಅಗತ್ಯವಿಲ್ಲ. ಇದು ಸಾಮಾನ್ಯವಾದ ಸೋಂಕಾಗಿದ್ದು ಯಾವುದೇ ಪ್ರಾಣಹಾನಿ ಆಗುವುದಿಲ್ಲ. ಜಿಲ್ಲೆಯಾದ್ಯಂತ ಕೆಂಗಣ್ಣು ರೋಗ ಹರಡುತ್ತಿದೆ, ಸುಳ್ಯ ತಾಲೂಕಿನಲ್ಲೂ ಪ್ರಕರಣ ವರದಿಯಾಗಿದೆ. ಭಯ ಬೇಡ ಕೆಲವು ಮುಂಜಾಗ್ರತಾ ಕ್ರಮ ಅವಶ್ಯವಾಗಿದೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ರೋಗಿಯು ಕನ್ನಡಕ ಧರಿಸುವುದು ಉತ್ತಮ. ರೋಗಿಯ ಕಣ್ಣನ್ನು ಮತ್ತೋರ್ವ ವ್ಯಕ್ತಿ ಬರಿ ಕಣ್ಣಿನಿಂದ ನೋಡ ಬಾರದು. ರೋಗಿ ಉಪಯೋಗಿಸಿದ ಟವಲ್ ಹಾಗೂ ಇನ್ನಿತರ ವಸ್ತುಗಳನ್ನು ಬಳಸಬಾರದು. ಅಲ್ಲದೆ ಕಣ್ಣು ನೋವಿಗೆ ತುತ್ತಾದ ರೋಗಿಯು ಐ ಡ್ರಾಪ್ಸ್ ಮಾತ್ರ ಬಳಸಬೇಕು, ಬೇರೆ ಎಣ್ಣೆಗಳನ್ನು ಬಳಸದೆ ಇರುವುದು ಉತ್ತಮ. ಅಲ್ಲದೆ ಕಣ್ಣು ನೋವು ಕಂಡು ಬಂದ ಮಗು ಅಥವಾ ವ್ಯಕ್ತಿ ಶಾಲೆ, ಕಚೇರಿಗೆ ಹೋಗಬಾರದು. ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆದುಕೊಂಡರೆ ಈ ಸೋಂಕು ಮತ್ತೊಬ್ಬರಿಗೆ ಹರಡುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.