ನ್ಯೂಸ್ ನಾಟೌಟ್ : ವಿಶ್ವದಾದ್ಯಂತ ಜನ ಮೆಚ್ಚಿದ ಸಿನಿಮಾ ಕಾಂತಾರದ ವರಾಹ ರೂಪಂ ಹಾಡಿನ ಬಳಕೆ ಮಾಡದಂತೆ ಚಿತ್ರ ತಂಡಕ್ಕೆ ಕೇರಳ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಕೋಯಿಕೋಡ್ ಜಿಲ್ಲಾ ನ್ಯಾಯಾಲಯ ತೈಕೂಡಂ ಬ್ರಿಡ್ಜ್ ಅರ್ಜಿಯನ್ನು ತಿರಸ್ಕರಿಸಿದೆ. ಇದು ಚಿತ್ರ ತಂಡಕ್ಕೆ ಸಿಕ್ಕಿದ ಗೆಲುವು ಎಂದೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಕೋಯಿಕೋಡ್ ಜಿಲ್ಲಾ ನ್ಯಾಯಾಲಯವು ವರಾಹ ರೂಪಂ ಹಾಡು ತೈಕೊಡಂ ಬ್ರಿಡ್ಜ್ನ ನಕಲು ಅಲ್ಲ ಎಂದು ತಿಳಿಸುವ ಮೂಲಕ ಅರ್ಜಿಯನ್ನು ತಿರಸ್ಕರಿಸಿದೆ. ತೈಕೊಡಂ ಬ್ರಿಡ್ಜ್ನ ಮ್ಯೂಸಿಕ್ ಗೂ ವರಾಹಂ ರೂಪಂ ಹಾಡಿನ ಮ್ಯೂಸಿಕ್ಗೂ ಸಂಬಂಧವಿಲ್ಲ. ಟ್ಯೂನ್ ಒಂದೇ ಇದ್ದರೂ ಭಾಷೆ ಬೇರೆ ಆಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಸದ್ಯ ಕಾಂತಾರ ಸಿನಿಮಾ ಯಶಸ್ಸಿ ಪ್ರದರ್ಶನ ಕಂಡು ೪೦೦ ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಗುರುವಾರ ಒಟಿಟಿ, ಆಮೆಜಾನ್ ಪ್ರೈಂ ನಲ್ಲಿ ಸಿನಿಮಾ ಗುರುವಾರ ತೆರೆ ಕಂಡಿದೆ. ಆದರೆ ನ್ಯಾಯಾಲಯದ ನಿರ್ದೇಶನದಂತೆ ವರಾಹಂ ರೂಪಂ ಮೂಲ ಹಾಡಿನ ಮ್ಯೂಸಿಕ್ ಗೆ ಕತ್ತರಿ ಹಾಕಿ ಹೊಸದಾಗಿ ಮ್ಯೂಸಿಕ್ ಮಾಡಲಾಗಿರುವ ಹಾಡನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.