ವರದಿ: ರಸಿಕಾ ಮುರುಳ್ಯ
ನ್ಯೂಸ್ ನಾಟೌಟ್ : ಸೂಕ್ತ ವಿದ್ಯಾರ್ಹತೆ ಇದ್ದರೂ ಉದ್ಯೋಗವಿಲ್ಲದ ವಿದ್ಯಾವಂತರು ಪರದಾಡುತ್ತಿದ್ದಾರೆ. ಅಂತಹ ಯುವ ಸಮೂಹಕ್ಕಾಗಿ ಇದೀಗ ಭಾರತೀಯ ಅಂಚೆ ಇಲಾಖೆ ಭರ್ಜರಿ ಅವಕಾಶ ನೀಡುತ್ತಿದೆ. ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ತಕ್ಷಣವೇ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 1,10,229 ಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೊಸ್ಟ್ ಮ್ಯಾನ್ ಹುದ್ದೆಗಳು ಖಾಲಿ ಇದೆ. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪಾಸದ ವಿದ್ಯಾರ್ಥಿ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 2022, ನ. 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.indiapost.gov.in ನಲ್ಲಿ ನೋಡಬಹುದು.
ಸರ್ಕಲ್ ಆಧಾರಿತ ಹುದ್ದೆಗಳ ಮಾಹಿತಿ ಇಲ್ಲಿದೆ:
ಆಂಧ್ರ ಪ್ರದೇಶ ಸರ್ಕಲ್- 4957, ಅಸ್ಸಾಂ ಸರ್ಕಲ್- 1897, ಬಿಹಾರ ಸರ್ಕಲ್-4053, ಛತ್ತೀಸ್ಗಢ ಸರ್ಕಲ್-1338, ದೆಹಲಿ ಸರ್ಕಲ್- 3641, ಗುಜರಾತ್ ಸರ್ಕಲ್- 6542, ಹರಿಯಾಣ ಸರ್ಕಲ್- 2105, ಹಿಮಾಚಲ ಪ್ರದೇಶ ಸರ್ಕಲ್- 1540, ಜಮ್ಮು &, ಕಾಶ್ಮೀರ ಸರ್ಕಲ್- 875, ಜಾರ್ಖಂಡ್-2489, ಕರ್ನಾಟಕ ಸರ್ಕಲ್-7258, ಕೇರಳ ಸರ್ಕಲ್- 6095, ಮಧ್ಯ ಪ್ರದೇಶ ಸರ್ಕಲ್- 4341, ಮಹಾರಾಷ್ಟ್ರ ಸರ್ಕಲ್- 13,225, NE,ಸರ್ಕಲ್-1095, ಒಡಿಶಾ ಸರ್ಕಲ್- 3809, ಪಂಜಾಬ್ ಸರ್ಕಲ್- 3629, ರಾಜಸ್ಥಾನ ಸರ್ಕಲ್-4634, ತಮಿಳುನಾಡು ಸರ್ಕಲ್12,415, ತೆಲಂಗಾಣ, ಸರ್ಕಲ್-2826, ಉತ್ತರಾಖಂಡ ಸರ್ಕಲ್-1554, ಉತ್ತರ ಪ್ರದೇಶ ಸರ್ಕಲ್-11,052, ಪಶ್ಚಿಮ ಬಂಗಾಳ ಸರ್ಕಲ್-8859.
- ಸಂಸ್ಥೆ – ಭಾರತೀಯ ಅಂಚೆ ಇಲಾಖೆ
- ಹುದ್ದೆ- ಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೊಸ್ಟ್ ಮ್ಯಾನ್
- ಒಟ್ಟು ಹುದ್ದೆ – 1,10,229
- ಮಾಸಿಕ ವೇತನ – 18000-81,100
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30 /11/2022