ನ್ಯೂಸ್ ನಾಟೌಟ್ : ಹಲವು ದಿನಗಳ ಹಿಂದೆ ಹಿಜಾಬ್ ನಿಷೇಧ ವಿಚಾರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಖಾಸಗಿ ಶಾಲೆಯಲ್ಲಿ ಕ್ರೀಡಾಕೂಟ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಜಾನ್ ಗೆ ಮಕ್ಕಳು ನೃತ್ಯ ಮಾಡಿದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಶಂಕರ ನಾರಾಯಣದ ಮದರ್ ಥೆರೆಸಾ ಮೆಮೋರಿಯಲ್ ಶಾಲೆಯಲ್ಲಿ ವಲಯ ಮಟ್ಟದ ಪ್ರಾಥಮಿಕ, ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಹಿಂದೂ ,ಮುಸ್ಲಿಂ ,ಕ್ರೈಸ್ತ ರ ಹಾಡುಗಳನ್ನು ಬಳಸಿದ್ದರು. ಈ ನೃತ್ಯದಲ್ಲಿ 30 ಸೆಕೆಂಡ್ ಅಜಾನ್ ಅನ್ನು ಬಳಸಿದ್ದರು. ಹಿಂದೂ ಸಂಘಟನೆಗಳಿಗೆ ಈ ವಿಷಯ ತಿಳಿದ ಬಳಿಕ ಸ್ಥಳಕ್ಕೆ ಕಾರ್ಯಕರ್ತರು ಆಗಮಿಸಿ, ಶಾಲೆಯ ಆಡಳಿತ ಮಂಡಳಿಯು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಬಳಿಕ ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವಿಷಯದ ಕುರಿತು ಶಾಲಾ ಆಡಳಿತ ಮಂಡಳಿಯು ಸದಸ್ಯರು ದೀರ್ಘ ಕಾಲ ಚರ್ಚೆ ನಡೆಸಿ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿಗಳು ಅಜಾನ್ ಗೆ ನೃತ್ಯ ಮಾಡಿದ ಬಳಿಕ ಬೈಬಲ್ ಮತ್ತು ಹಿಂದೂ ಶ್ಲೋಕಗಳಿಗೂ ಹೆಜ್ಜೆ ಹಾಕಿದ್ದಾರೆ. ಯಾವುದೇ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಬರುವ ಉದ್ದೇಶವಾಗಿಲ್ಲ. ಈ ಘಟನೆಯಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ರೆ ಕ್ಷಮೇ ಕೇಳುತ್ತೇವೆ ಎಂದು ಶಾಲಾ ಆಡಳಿತ ಮಂಡಳಿಯ ಮುಖ್ಯಶ್ಥರು ಹೇಳಿದ್ದಾರೆ.