ನ್ಯೂಸ್ ನಾಟೌಟ್: ಇದು ಸ್ಮಾರ್ಟ್ ಫೋನ್ ಯುಗ. ಯಾರ ಕಿವಿ ನೋಡಿದರೂ ಇಯರ್ ಬಡ್ಸ್ಗಳನ್ನೇ ಕಾಣುವಂತಹ ದಿನಗಳು. ಇಂತಹ ಪರಿಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ಇಯರ್ ಬಡ್ಸ್ಗಳ ಬಳಕೆ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಲಿದೆ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಯುವಜನತೆ ಇಯರ್ ಪೋನ್ ಮತ್ತು ಹೆಡ್ ಪೋನ್ ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಮನೆಯಲ್ಲಿ ಫ್ರೀ ಆಗಿದ್ದಾಗ, ವಾಕಿಂಗ್ ಮಾಡುತ್ತಿರುವಾಗ, ಬಸ್ಸಿನಲ್ಲಿ ಪ್ರಯಾಣಿಸುವಾಗ , ಬೈಕ್ ನಲ್ಲಿ ಹೋಗುವಾಗ, ಎಲ್ಲೇ ನೋಡಿದ್ರು ಕಿವಿಯಲ್ಲಿ ಇಯರ್ ಪೋನ್ ಗಳು ಅಥವಾ ಇಯರ್ ಬಡ್ಗಳು ಇದ್ದೇ ಇರುತ್ತದೆ. ಕೆಲವರಿಗೆ ಒಂದು ದಿನವೂ ಕಿವಿಯಿಂದ ತಪ್ಪುವುದಿಲ್ಲ. ಸಂಗೀತವನ್ನು ಆನಂದಿಸಲು, ಪೋನ್ ನಲ್ಲಿ ಮಾತನಾಡುವಾಗಲೂ ಇಯರ್ ಫೋನ್ಗಳನ್ನು ಬಳಕೆ ಮಾಡುತ್ತಾರೆ.
ಈ ಆಡಿಯೋ ಗ್ಯಾಜೆಟ್ಗಳ ಅತಿಯಾದ ಬಳಕೆಯಿಂದಾಗಿ ವಿಶ್ವಾದ್ಯಂತ ಒಂದು ಶತಕೋಟಿ ಟೀನೇಜರ್ಸ್ ಮತ್ತು ಯುವಜನರಲ್ಲಿ ಶ್ರವಣ ದೋಷದ ಅಪಾಯ ಕಾಣಿಸುತ್ತಿದೆ.
ಬಿಎಂಜೆ ಗ್ಲೋಬಲ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಸುಮಾರು ಒಂದು ಶತಕೋಟಿ ಹದಿಹರೆಯದವರು ಮತ್ತು ಯುವಜನರು ಹೆಡ್ಫೋನ್ಗಳು ಮತ್ತು ಇಯರ್ಬಡ್ಗಳ ಮಿತಿಮೀರಿದ ಬಳಕೆಯಿಂದಾಗಿ ಶ್ರವಣ ದೋಷ ಉಂಟಾಗುವ ಸಂಭಾವ್ಯತೆ ಹೆಚ್ಚಿದೆ. ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್) ಯ ಮತ್ತೊಂದು ಅಧ್ಯಯನದ ಪ್ರಕಾರ, 6 ರಿಂದ 19 ವರ್ಷ ವಯಸ್ಸಿನ ಸುಮಾರು 12.5 ಪ್ರತಿಶತದಷ್ಟು ಮಕ್ಕಳು ಮತ್ತು ಹದಿಹರೆಯದವರು (ಅಂದಾಜು 5.2 ಮಿಲಿಯನ್) ಮತ್ತು 20-69 ವರ್ಷ ವಯಸ್ಸಿನ ವಯಸ್ಕರಲ್ಲಿ 17 ಪ್ರತಿಶತದಷ್ಟು (ಸುಮಾರು 26 ಮಿಲಿಯನ್) ಶಾಶ್ವತ ಶ್ರವಣ ಹಾನಿಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಯ ಮತ್ತೊಂದು ವರದಿಯ ಪ್ರಕಾರ, ವಿಶ್ವಾದ್ಯಂತ 430 ಮಿಲಿಯನ್ ಜನರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.
ಶ್ರವಣ ದೊಷ ಬಾರದಂತೆ ತಡೆಗಟ್ಟುವಿಕೆಯ ಹಂತ:
- ಟಿವಿ ಅಥವಾ ಸ್ಪೀಕರ್ ಗಳು ಅಥವಾ ಹೆಡ್ಫೋನ್ಗಳು ಅಥವಾ ಇಯರ್ಬಡ್ಗಳನ್ನು ಬಳಸುವಾಗ ವಾಲ್ಯೂಮ್ ಅನ್ನು ಕಡಿಮೆ ಮಾಡಬೇಕು.
- ನಗರದಲ್ಲಿ ಸಂಚರಿಸುವಾಗ ವಾಹನಗಳ ಶಬ್ಧ ಕೇಳದಂತೆ ತಡೆಯಲು ಇಯರ್ ಫೋನ್ ವಾಲ್ಯೂಮ್ ಅನ್ನು ಹೆಚ್ಚಿಸುತ್ತಾರೆ. ಆದ್ದರಿಂದ ಶಬ್ಧ ಕೇಳದಂತೆ ತಡೆಯುವ ಇಯರ್ಫೋನ್ಗಳು ಮತ್ತು ಹೆಡ್ಫೋನ್ಗಳನ್ನು ಖರೀದಿಸುವುದು ಒಳ್ಳೆಯದು.
- ಇಯರ್ಬಡ್ಗಳು ಇಯರ್ಲೋಬ್ ಅನ್ನು ಆವರಿಸುತ್ತವೆ ಮತ್ತು ಇಯರ್ಡ್ರಮ್ಗೆ ಹತ್ತಿರದಲ್ಲಿರುತ್ತವೆ. ಆದರೆ, ಹೆಡ್ಫೋನ್ಗಳು ಕಿವಿಯನ್ನು ಆವರಿಸುತ್ತವೆ. ಇದರಿಂದ ಸಂಗೀತದ ಕಂಪನ ನೇರವಾಗಿ ಕಿವಿಗೆ ಕಳುಹಿಸುವುದಿಲ್ಲ. ಆದ್ದರಿಂದ, ಹೆಡ್ಫೋನ್ ಬಳಕೆ ಮಾಡುವುದು ಉತ್ತಮ.
- ಸಂಗೀತ ಆಲಿಸುವಾಗ ಪ್ರತಿ 30 ನಿಮಿಷಗಳಿಗೊಮ್ಮೆ 5 ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಅಥವಾ ಪ್ರತಿ 60 ನಿಮಿಷಗಳ ಕಾಲ ಸಂಗೀತ ಆಲಿಸಿದ ನಂತರ 10 ನಿಮಿಷಗಳ ವಿರಾಮವನ್ನು ತೆಗೆದುಕೊಳ್ಳಬೇಕು. ಇದು ಕಿವಿಗಳಿಗೆ ವಿರಾಮ ನೀಡುತ್ತದೆ. ಹಾಗಾಗೀ ಶ್ರವಣ ದೋಷ ಬಾರದಂತೆ ತಡೆಗಟ್ಟಬಹುದು.