ನ್ಯೂಸ್ ನಾಟೌಟ್: ಬೀದಿ ಬೀದಿಗಳಲ್ಲಿ ಕಿತ್ತಳೆ ಮಾರಿ ಬಡವರ ಮಕ್ಕಳಿಗೆ ಅದೇ ಹಣದಲ್ಲಿ ಶಾಲೆ ಕಟ್ಟಿ ಅಕ್ಷರಸಂತ ಎಂದೇ ಖ್ಯಾತಿಯಾದ ಸಿಂಪಲ್ ಮ್ಯಾನ್ ಹರೇಕಳ ಹಾಜಬ್ಬ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ತನಗೆ ಶಿಕ್ಷಣ ಕಲಿಯುವ ಅವಕಾಶ ಸಿಗದಿದ್ದರೂ ಇತರರು ಕಲಿಯಲಿ ಬೆಳೆಯಲಿ ನಾಲ್ಕು ಜನರಿಗೆ ಸಹಾಯ ಮಾಡಲಿ ಎಂದು ಅಕ್ಷರ ಸಂತ ಶಾಲೆಯೆಂಬು ದೇಗುಲ ನಿರ್ಮಿಸಿದರು. ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದರು. ಈ ಹಿನ್ನೆಲೆಯಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂತು. ಇವರ ಸಾಧನೆ ಕಂಡು ಹಲವಾರು ಕಡೆಗಳಲ್ಲಿ ಸನ್ಮಾನ ಮಾಡಿ ಗೌರವಿಸಿದ್ದಾರೆ. ಇದೀಗ ಹರೇಕಳ ಗ್ರಾಮದ ಜನರು ಹರೇಕಳದ ಬಾವಲಿಗುರಿ ಪ್ರದೇಶದಲ್ಲಿ ನೂತನ ಕಟ್ಡ ನಿರ್ಮಾಣ ಮಾಡಿದ್ದಾರೆ. ನೂತನ ಗ್ರಾಮಪಂಚಾಯಿತಿ ನಿರ್ಮಾಣ ಹಂತದಲ್ಲಿದ್ದು, ಈ ಕಟ್ಟಡದ ಗೋಡೆಯಲ್ಲಿ ಪೂರ್ತಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರ ಚಿತ್ರವನ್ನು ಬಿಡಿಸಿದ್ದಾರೆ. ಹರೇಕಳ ಗ್ರಾಮದ ಹೆಸರನ್ನು ಜಗತಿನಾದ್ಯಂತ ಪರಿಚಯಿಸಿದ ಹಾಜಬ್ಬರವರಿಗೆ ತನ್ನೂರಿನಲ್ಲಿ ವೀಶೆಷ ಗೌರವ ನೀಡುವಂತೆ , ಹರೇಕಳ ಗ್ರಾಮದ ಎಲ್ಲ ಸದಸ್ಯರು ಒಟ್ಟೂಗೂಡಿ ಹಾಜಬ್ಬರವರು ಕಿತ್ತಾಳೆ ಹಣ್ಣು ಮಾರುತ್ತಿರುವ ದೃಶ್ಯವನ್ನು ಗ್ರಾಮ ಪಂಚಾಯತಿ ಗೋಡೆಯಲ್ಲಿ ಬಿಡಿಸಿದ್ದಾರೆ ಎಂದು ಗ್ರಾಮ ಪಂಚಯತ್ ಅಧ್ಯಕ್ಷ ಬದ್ರುದ್ದೀನ್ ತಿಳಿಸಿದರು. ಶಾಸಕರ ಹಾಗೂ ಹಲವು ಅನುದಾನದಡಿ ಹರೇಕಳ ಗ್ರಾಮಕ್ಕೆ ಬಾವಲಿಗುರಿ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಒಂದೂವರೆ ವರ್ಷದಿಂದ ನಡೆಯುತ್ತಿದ್ದ ಕಾಮಗಾರಿ ವ್ಯವಸ್ಥೆಯು ಬಿಡುಗಡೆ ಹಂತದಲ್ಲಿದ್ದು, ಉದ್ಘಾಟನೆ ಶೀಘ್ರದಲ್ಲಿದೆ.