ನ್ಯೂಸ್ ನಾಟೌಟ್: ಸ್ವತಂತ್ರ ಭಾರತದ ಮೊತ್ತ ಮೊದಲ ಮತದಾರ 106 ವರ್ಷದ ಶ್ಯಾಮ್ ಶರಣ್ ನೇಗಿ ಹಿಮಾಚಲ ಪ್ರದೇಶದ ವಿಧಾನಸಭೆ ಚನಾವಣೆಗೆ 34ನೇ ಸಲ ಮತದಾನ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಬುಡಕಟ್ಟು ಕಿನ್ನೌರ್ ಜಿಲ್ಲೆಯ ಶ್ಯಾಮ್ ಶರಣ್ ನೇಗಿ, ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಿದ ಮೊತ್ತಮೊದಲ ಮತದಾರ ಆಗಿದ್ದಾರೆ.ವೃತ್ತಿಯಲ್ಲಿ ಶಿಕ್ಷಕರಾಗಿದ್ದ ನೇಗಿ, 14ನೇ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ಕಲ್ಪಾದಲ್ಲಿರುವ ತಮ್ಮ ಮನೆಯಲ್ಲಿ ಅಂಚೆ ಮೂಲಕ ಮತದಾನದ ಹಕ್ಕು ಚಲಾಯಿಸಿದರು. 1917ರ ಜುಲೈಯಲ್ಲಿ ಜನಿಸಿದ ನೇಗಿ ಅವರು 1951ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದರು. ಈವರೆಗೆ ಲೋಕಸಭೆಯಲ್ಲಿ 16 ಬಾರಿ ಮತ್ತು 1951ರ ನಂತರ ಪ್ರತಿ ಲೋಕಸಭೆ, ವಿಧಾನಸಭೆ ಮತ್ತು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮತ ಚಲಾಯಿಸಿದ್ದಾರೆ. 2014ರಲ್ಲಿ ಅವರನ್ನು ಹಿಮಾಚಲ ಪ್ರದೇಶದ ರಾಜ್ಯ ಚುನಾವಣೆ ಐಕಾನ್ ಆಗಿ ಗುರುತಿಸಲಾಗಿತ್ತು.