ನ್ಯೂಸ್ ನಾಟೌಟ್: ಇಂದಿನ ದಿನ ಸಾಮಾಜಿಕ ಜಾಲತಾಣ ಅನ್ನೋದು ಜನರ ದೈನಂದಿನ ಜೀವನದಲ್ಲಿ ಬೆರೆತು ಬಿಟ್ಟಿದೆ. ಜನರು ಪ್ರತಿನಿತ್ಯ ಕೋಟ್ಯಂತರ ಪೋಸ್ಟ್ಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಅಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಫೇಸ್ ಬುಕ್ ಕೂಡ ಒಂದು.
ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ದಿನದಿಂದ ದಿನಕ್ಕೆ ಹೆಚ್ಚು ಬಲಿಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಂದಿಷ್ಟು ನಿಯಂತ್ರಣಗೊಳಿಸುವ ಕೆಲಸಗಳನ್ನೂ ಮೆಟಾ ಸಂಸ್ಥೆ ಮಾಡುತ್ತಿದೆ. ಒಂದು ಧರ್ಮವನ್ನು ಮತ್ತೊಂದು ಧರ್ಮದವರು ಟೀಕಿಸುವುದು, ಜಾಲತಾಣದಲ್ಲಿ ಮನಬಂದಂತೆ ಅನ್ಯ ಧರ್ಮದವರನ್ನು ಟೀಕಿಸುವುದು ಹೀಗೆಲ್ಲ ಇನ್ನು ಮುಂದೆ ಮಾಡಿದರೆ ಅಪರಾಧ ಎಂದು ಮೆಟಾ ಸಂಸ್ಥೆ ತಿಳಿಸಿದೆ. ಡಿಸೆಂಬರ್ 1 ರಿಂದ ಫೇಸ್ ಬುಕ್ನಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ ಎಂದು ಫೇಸ್ ಬುಕ್ ಸಂಸ್ಥೆ ತಿಳಿಸಿದೆ. ಪ್ರೊಫೈಲ್ ಬಯೋದಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ ಮತ್ತು ಮಾಹಿತಿಯನ್ನು ಸೂಚಿಸುವ ವಿಷಯಗಳನ್ನು ಹಾಕಿದ್ದರೆ, ಸ್ವಯಂಚಾಲಿತವಾಗಿ ತೆಗೆದು ಹಾಕುವ ಕ್ರಮಕ್ಕೆ ಮೇಟಾ ಸಂಸ್ಥೆ ಮುಂದಾಗಿರುವುದು ವಿಶೇಷವಾಗಿದೆ.