ಸಂದರ್ಶನ: ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್ : ಅಂಧರ ಟಿ೨೦ ವಿಶ್ವಕಪ್ ಕ್ರಿಕೆಟ್ಗೆ ದಿನಗಣನೆ ಆರಂಭವಾಗಿದೆ. ಎಂಟು ತಂಡಗಳು, ಇಪ್ಪತ್ತನಾಲ್ಕು ಪಂದ್ಯಗಳು ನಡೆಯಲಿದ್ದು ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಫೈನಲ್ ಪಂದ್ಯವು ( ಡಿ .೧೭)ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮೊದಲನೇ ಪಂದ್ಯವು ಹರಿಯಾಣದ ಫರಿದಾಬಾದ್ನಲ್ಲಿ ನಡೆಯಲಿದೆ. ಭಾರತ ಹಾಗೂ ನೇಪಾಳದ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಭಾರತ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಅಂಧರ ಟಿ೨೦ ವಿಶ್ವಕಪ್ ಗೆ ಭಾರತ ತಂಡವು ಕಠಿಣ ಅಭ್ಯಾಸ ಆರಂಭಿಸಿದೆ. ಕೋಚ್ ಆಸಿಫ್ ಭಾಷಾ ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಯುತ್ತಿದೆ. ನ.೮ರಿಂದ ಅಭ್ಯಾಸ ಆರಂಭವಾಗಿದೆ. ಒಟ್ಟು ೧೫ ದಿನ ತರಬೇತಿ ನಡೆಯಲಿದೆ. ನ.೨೩ಕ್ಕೆ ತರಬೇತಿ ಅಂತಿಮ ಹಂತಕ್ಕೆ ಬಂದು ತಲುಪಲಿದೆ ಎಂದು ಸಿಎಬಿಐ (ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ) ಮತ್ತು ಸಮರ್ಥನಂ ಟ್ರಸ್ಟ್ ಮಾಹಿತಿ ನೀಡಿದೆ. ಬೆಂಗಳೂರು ಸಮೀಪದ ಅನೇಕಲ್ ಗ್ರಾಮದ ಸಚಿನ್ ತೆಂಡೂಲ್ಕರ್ ಟರ್ಫ್ ಮೈದಾನದಲ್ಲಿ ಅಂಧರ ರಾಷ್ಟೀಯ ಕ್ರಿಕೆಟ್ ತಂಡದ ೧೭ ಬೆಸ್ಟ್ ಆಟಗಾರರಿಗೆ ೧೫ ದಿನಗಳ ಕಾಲ ತರಬೇತಿ ಆರಂಭಿಸಲಾಗಿದೆ.
ಅಂಧರ ಭಾರತ ತಂಡದಲ್ಲಿ ರಾಜ್ಯದ ಮೂವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಅಜಯ್ ಕುಮಾರ್ ರೆಡ್ಡಿ, ಪ್ರಕಾಶ್ ಜಯರಾಮ್, ಸುನಿಲ್ ರಮೇಶ್ ನಿರೀಕ್ಷೆ ಮೂಡಿಸಿದ್ದಾರೆ. ತಂಡವನ್ನು ನಾಯಕರಾಗಿರುವ ಅಜಯ್ ಕುಮಾರ್ ರೆಡ್ಡಿ ಮುನ್ನಡೆಸಲಿದ್ದಾರೆ. ಉಪನಾಯಕನಾಯಕನಾಗಿ ವೆಂಕಟೇಶ್ ರಾವ್ ದುನ್ನಾ ತಂಡವನ್ನು ಪ್ರತಿನಿಧಿಸಲಿದ್ದಾರೆ.
ವಿವಿಧ ನಗರಗಳ ಕ್ರೀಡಾಂಗಣದಲ್ಲಿ ಒಟ್ಟು ೨೪ ಪಂದ್ಯ ನಡೆಯಲಿದ್ದು, ಭಾರತ, ಆಸ್ಟೇಲಿಯಾ, ನ್ಯೂಜಿಲೆಂಡ್, ನೇಪಾಳ, ಶ್ರೀಲಂಕಾ , ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಂಧರ ೮ ತಂಡಗಳು ಭಾಗವಹಿಸಲಿದ್ದಾರೆ ಎಂದು ದಿ ಕ್ರಿಕೆಟ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಮತ್ತು ಸಮರ್ಥನಂ ಟ್ರಸ್ಟ್ ನ ಅಧ್ಯಕ್ಷ ಡಾ. ಮಹಾಂತೇಶ್ ಜಿ.ಕೆ ತಿಳಿಸಿದ್ದಾರೆ.
೩ ನೇ ಟಿ ೨೦ ವಿಶ್ವಕಪ್ ಆಟಗಾರರ ಪಾಲಿಗೆ ಈ ತರಬೇತಿ ಶಿಬಿರವು ಅತ್ಯಂತ ಪ್ರಯೋಜನಕಾರಿ ಮತ್ತು ಉಪಯುಕ್ತವಾಗಲಿದೆ. ತಂಡದ ಎಲ್ಲಾ ಆಟಗಾರಿಗೂ ಪಾಲ್ಗೊಳ್ಳುವಿಕೆ, ಕಲಿಕೆ ಮತ್ತು ಯಶಸ್ಸಿನ ವಾತಾವರಣವನ್ನು ಕಲ್ಪಿಸಿದೆ. ಇದರಿಂದಾಗಿ ತಮ್ಮ ಪಂದ್ಯಾವಳಿಯಲ್ಲಿ ನಮ್ಮ ತಂಡದ ಆಟಗಾರರು ಆಟದ ಮೇಲೆ ಹೆಚ್ಚು ಗಮನಹರಿಸಲು ಮತ್ತು ವಿಶ್ವಾಸದಿಂದ ಆಟವಾಡಿ ಕಪ್ ತರುವ ವಿಶ್ವಾಸವಿದೆ.
ಡಾ. ಜಿ.ಕೆ. ಮಹಾಂತೇಶ್ , ದಿ ಕ್ರಿಕೆಟ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ ಅಧ್ಯಕ್ಷ
ಈಗ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ೧೭ ಅತ್ಯುತ್ತಮ ಪ್ರತಿಭಾವಂತ ಆಟಗಾರರು ನಮ್ಮ ಭಾರತ ತಂಡದ ಒಂದು ಭಾಗವಾಹಿರುವುದು ನಮಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ. ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲು,ತಂಡವನ್ನು ಪ್ರತಿನಿಧಿಸಲು ತರಬೇತಿಯು ಅವರಿಗೆ ನೆರವಾಗಲಿದೆ.
ಇ ಜಾನ್ ಡೇವಿಡ್ , ದಿ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ
ನಮ್ಮ ತಂಡದ ಪ್ರತಿಯೊಬ್ಬ ಆಟಗಾರರು ಉತ್ಸುಕರಾಗಿದ್ದು ೩ ನೇ ಟಿ ೨೦ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಲು ಕಾಯುತ್ತಿದ್ದಾರೆ. ಕಠಿಣ ತರಬೇತಿ ವೇಗಕ್ಕೆ ತಂಡದ ಎಲ್ಲಾ ಆಟಗಾರರು ಪರಿಪೂರ್ಣವಾಗಿ ಸವಾಲಿನ ಅಗ್ನಿಪರೀಕ್ಷೆಗೆ ತಯಾರಾಗಿದ್ದಾರೆ.
ಆಸಿಫ್ ಭಾಷಾ, ಅಂಧರ ತಂಡದ ಮುಖ್ಯ ಕೋಚ್