ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಫೆ.13ರಿಂದ ಐದು ದಿನಗಳ ಕಾಲ ವಿಮಾನ ಪ್ರದರ್ಶನ ನಡೆಯಲಿದೆ. ಏಷ್ಯಾದ ಅತೀ ದೊಡ್ಡ ಏರ್ ಶೋ ‘ಏರೋಇಂಡಿಯಾ’ ಇದು ಪ್ರತಿ 2 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. 2021ರಲ್ಲಿ ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮ ಕೇವಲ 3 ದಿನಗಳ ಕಾಲ ಮಾತ್ರ ನಡೆದಿತ್ತು. ಆದರೆ ಈ ಬಾರಿ ಐದು ದಿನಗಳ ಕಾಲ ವಿಮಾನವು ಹಾರಲಿದೆ.
ಮೊದಲ 3 ದಿನದ ಏರ್ಶೋ ಅನ್ನು ವ್ಯಾಪಾರಿ ಸಂದರ್ಶಕರಿಗಾಗಿ ಕಾಯ್ದಿರಿಸಲಾಗಿದೆ. ಅದೇ ಕೊನೆಯ 2 ದಿನಗಳ ಶೋ ಸಾರ್ವಜನಿಕರಿಗಾಗಿ ತೆರೆದಿರಲಿದೆ. ಏರೋ ಇಂಡಿಯಾ 2018ರಿಂದಲೂ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್ ಎಎಲ್) ಆಯೋಜನೆ ಮಾಡುತ್ತಲೇ ಬಂದಿದೆ. ಈ ಬಾರಿಯು 2023 ಏರ್ ಶೋ ವನ್ನು ಎಚ್ಎಎಲ್ ಆಯೋಜನೆ ಮಾಡಲಿದೆ. 1990ರಿಂದಲೂ ಯಲಹಂಕದ ವಾಯುಪಡೆ ನೆಲೆಯಲ್ಲಿ ನಡೆಯುತ್ತಲೇ ಬಂದಿದೆ. ಕೋಡ್ ನಂತರ ಭಾರೀ ಸಂಖ್ಯೆಯಲ್ಲಿ ಭಾರತೀಯ ಹಾಗೂ ವಿದೇಶಿ ಪ್ರದರ್ಶಕರು ವಿಮಾನಗಳ ಪ್ರದರ್ಶನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.