ನ್ಯೂಸ್ ನಾಟೌಟ್ : ಹೊಟ್ಟೆಪಾಡಿಗೆ ಜನ ಏನೇನೋ ವೇಷ ಹಾಕ್ತಾರೆ. ಆದರೆ ಇಲ್ಲೊಬ್ಬ ಕಿಡಿಗೇಡಿ ಮಹಿಳೆಯ ವೇಷ ಧರಿಸಿ ಜನರಿಂದ ಹಣ ದೋಚಿ ಸಿಕ್ಕಿಬಿದ್ದಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಎಂಬಲ್ಲಿ ಘಟನೆ ನಡೆದಿದೆ. ಸಿಕ್ಕಿಬಿದ್ದ ಈತನಿಗೆ ಸಾರ್ವಜನಿಕರಿಂದ ಸರಿಯಾಗಿ ಗೂಸ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಅರಂತೋಡಿನ ಬಾಡಿಗೆ ಮನೆಯಲ್ಲಿರುವ ಗೂನಡ್ಕ ಮೂಲದ ಯುವಕ ರಾತ್ರಿ ಸಮಯದಲ್ಲಿ ಮಹಿಳೆಯ ವೇಷ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿ ಸಾವ೯ಜನಿಕರಿಂದ ಹಣ ವಸೂಲು ಮಾಡುತ್ತಿದ್ದ. ಈತನ ನಡತೆಯಿಂದ ಸಂಶಯಗೊಂಡ ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ ಆತ ವೇಷ ಬದಲಿಸಿರುವ ಸಂಗತಿ ಬಯಲಾಗಿದೆ. ನಿಜ ವಿಷಯ ತಿಳಿದ ಸಾವ೯ಜನಿಕರು ಆತನಿಗೆ ಥಳಿಸಿದ್ದಾರೆ ಎಂದು ವರದಿಯಾಗಿದೆ.